
ಹೌದು, ಇಸ್ರೇಲ್ ಯುದ್ಧವೇ ಅಂಥಾದ್ದು. ಅಲ್ಲಿನ ರಕ್ತದೋಕುಳಿ ಎಂಥಾವ್ರನ್ನೂ ಬೆಚ್ಚಿ ಬೀಳಿಸದಿರಲ್ಲ. ಅಲ್ಲಿನ ಪ್ರತಿ ಇಂಚು ನೆಲವೂ ನರ ರಕ್ತದಿಂದ ಕೂಡಿದೆ. ಹಾಗಾಗಿಯೇ ಅಲ್ಲಿನ ಪ್ರತಿ ಮನೆಮನಗಳಲ್ಲಿ ದುಃಖ ಮಡುಗಟ್ಟಿದೆ. ಅಲ್ಲಿನ ಜನತೆ ನಿತ್ಯ ಗೋಲಾಡುವಂತಾಗೆದೆ. ಪ್ರತಿಕ್ಷಣ ಕಣ್ಣೀರಿನಲ್ಲೇ ಮುಳುಗುವಂತಾಗಿದೆ.
ಇಸ್ರೇಲ್ನಲ್ಲಿ ಮಡಿದವರ ಮೃತದೇಹಗಳ ರಾಶಿ ಮನ ಕಲಕುವಂತಾಗಿದೆ. ಎಲ್ಲಾ ವಯೋಮಾನದವರ ರಾಶಿ ರಾಶಿ ಶವಗಳು ಕಟುಕರ ಮನಸ್ಸನ್ನೂ ಕರಗುವಂತೆ ಮಾಡುತ್ತಿವೆ. ಶವಗಳನ್ನೇ ಗೋಪುರವನ್ನಾಗಿಸಿರುವ ಘೋರ ದೃಶ್ಯ ನೋಡಿ ಮಾಧ್ಯಮ ಪ್ರತಿನಿಧಿಗಳೇ ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಇಸ್ರೇಲ್ನಲ್ಲಿ ಗರ್ಭಿಣಿಯ ಘೋರ ಕಥೆಯೊಂದು ಕರಳು ಹಿಂಡುವಂತಾಗಿದೆ. ಆಕೆಯ ಹೊಟ್ಟೆಯನ್ನು ಸೀಳಿ ಆಕೆಯ ಗರ್ಭದಲ್ಲಿದ್ದ ಮಗುವನ್ನು ಹೊರಗೆ ತೆಗೆದು ಆ ಮಗುವನ್ನು ಕೂಡ ಕೊಂದಿದ್ದಾರೆ ಕಿರಾತಕರು. ಅದು ಆ ಮಗುವನ್ನು ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾರೆ. ಅಲ್ಲಿ ಘನಘೋರ ಎಂದರೆ ತಂದೆ ತಾಯಿಗಳನ್ನ ಬಿಟ್ಟುಹೋದ ಮಕ್ಕಳು , ಮಕ್ಕಳನ್ನ ಬಿಟ್ಟು ಹೋದ ತಂದೆ ತಾಯಯರೂ ಸಾಕಷ್ಟಿದ್ದಾರೆ. ಈ ಯುದ್ಧ ಎಷ್ಟು ಬೇಗ ಮುಗಿದರೆ ಸಾಕಪ್ಪಾ ಅಂತಾ ಅಲ್ಲಿನ ಜನತೆ ಕಾದು ಕುಳಿತಿದ್ದಾರೆ. ದೇವರ ಮೊರೆ ಹೋಗಿದ್ದಾರೆ. ಮನುಕುಲವನ್ನೇ ಕಂಗೆಡಿಸಿರುವ ಈ ಯುದ್ಧ ನಿಲ್ಲುವಂತಾಗಲಿ ಎಂದು ನಾವೂ ಹಾರೈಸುತ್ತೇವೆ.
Poll (Public Option)

Post a comment
Log in to write reviews