ಇಂದಿನಿಂದ ರಾಜ್ಯದಲ್ಲೆಡೆ ಶಾಲೆ ಆರಂಭವಾಗಿದ್ದು, ಶಾಲೆಗಳ ಆಡಳಿತ ಮಂಡಳಿ ಮಕ್ಕಳನ್ನ ಸ್ವಾಗತಿಸಿವೆ. ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಏ.29 ರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಿದೆ.
ಎರಡು ತಿಂಗಳ ಬೇಸಿಗೆ ರಜೆ ಕೊಟ್ಟಿದ್ದ ಶಾಲೆಗಳು ಇಂದಿನಿಂದ ಆರಂಭವಾಗಿದ್ದು, ರಜೆ ಮುಗಿಸಿಕೊಂಡು ವಾಪಾಸ್ ಆಗಿರುವ ಚಿಣ್ಣರಿಗೆ ಹಲವು ಶಾಲೆಗಳು ವಿವಿಧ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಶಾಲಾ ಪ್ರಾರಂಭೋತ್ಸವದ ಮೂಲಕ ಸಿಹಿ ನೀಡಿ ಶಿಕ್ಷಕರು ಬರ ಮಾಡಿಕೊಂಡಿದ್ದಾರೆ. ಶಾಲೆಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಲಾಗಿದೆ. ಶಾಲೆಗಳಿಗೆ ತಳಿರು ತೋರಣ, ರಂಗೋಲೆ ಬಿಡಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯಶಿಕ್ಷಕರುಗಳಿಗೆ ಇಲಾಖೆ ಸೂಚಿಸಿತ್ತು. ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಅವರಿಗೆ ಹೂವು, ಚಾಕೊಲೇಟ್ ಸೇರಿದಂತೆ ಸಿಹಿ ನೀಡಿ ಹಲವೆಡೆ ಮಕ್ಕಳನ್ನು ಸ್ವಾಗತಿಸಲಾಗಿದೆ.
Post a comment
Log in to write reviews