
ರಾಮನಗರ ಜೂನ್ 1: ಬೆಂಗಳೂರು ಪದವೀಧರರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಅ.ದೇವೇಗೌಡ ಪರ ಡಾ.ಮಂಜುನಾಥ್ ಪ್ರಚಾರ ನಡೆಸಿದರು.
ರಾಮನಗರದಲ್ಲಿ ಶನಿವಾರ ಪ್ರಚಾರದ ವೇಳೆ ಮಾತನಾಡಿದ ಅವರು ಅ.ದೇವೇಗೌಡ ಅವರಿಗೆ ಹಿಂದೆ ವಿಧಾನಪರಿಷತ್ತಿನಲ್ಲಿ ಕೆಲಸ ಮಾಡಿದ ಅನುಭವವಿದೆ. ಅಲ್ಲದೆ ಅವರಿಗೆ ಅವರದ್ದೇ ಆದ ಮತಗಳು ಇದೆ. ಲೋಕಸಭಾ ಚುಣಾವಣೆ ವೇಳೆ ಇದ್ದ ಒಗ್ಗಟ್ಟಿನಂತೆಯೇ ಈಗಲೂ ಮೈತ್ರಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು ಅ.ದೇವೇಗೌಡರ ಗೆಲುವಿನ ವಿಶ್ವಾಸ ಹೆಚ್ಚಾಗಿದೆ ಎಂದರು. ಅ.ದೇವೇಗೌಡ ಪ್ರಾಮಾಣಿಕ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ. ಇವರು ವಿಧಾನಪರಿಷತ್‌ಗೆ ಆಯ್ಕೆಯಾದರೆ ಗೌರವ ಘನತೆ ಹೆಚ್ಚಾಗುತ್ತದೆ ಎಂದರು. ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ತಮಗೆ ಗೆಲುವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Poll (Public Option)

Post a comment
Log in to write reviews