ಸೊಂಟಕ್ಕೆ ಕಬ್ಬಿಣದ ಸರಪಳಿ ಕಟ್ಟಿಕೊಂಡು ಪೊಲೀಸ್ ಪರೀಕ್ಷೆಗೆ ಹಾಜರಾದ ಮಹಿಳಾ ಅಭ್ಯರ್ಥಿ

ಉತ್ತರಪ್ರದೇಶ: ಮಹಿಳಾ ಅಭ್ಯರ್ಥಿಯೊಬ್ಬರು ಸೊಂಟಕ್ಕೆ ಕಬ್ಬಿಣದ ಸರಪಳಿ ಕಟ್ಟಿಕೊಂಡು ಪೊಲೀಸ್ ಪರೀಕ್ಷೆಗೆ ಹಾಜರಾಗಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್ಗಂಜ್ನಲ್ಲಿ ನಡೆದಿದೆ.
ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಕೊನೆಯ ದಿನವಾದ ಶನಿವಾರ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿದ್ದರು, ಅವರ ತಪಾಸಣೆ ಮಾಡುವಾಗ ಸೊಂಟದಲ್ಲಿ ಕಬ್ಬಿಣದ ಸರಳಿರುವುದು ಕಂಡುಬಂದಿದೆ. ಆಗ ವಿಚಾರಿಸಿದ ಪರೀಕ್ಷ ಸಿಬಂದ್ದಿಗಳು,ಪರೀಕ್ಷೆ ಬೇಕಾದರೂ ಬಿಡುತ್ತೇನೆ ಆದರೆ ಯಾವುದೇ ಕಾರಣಕ್ಕೂ ಈ ಸರಪಳಿ ಮಾತ್ರ ತೆಗೆಯುವುದಿಲ್ಲ ಎಂದು ಆಕೆ ಹಠ ಹಿಡಿದಿದ್ದಳು. ನಂತರ ಅವರ ಪೋಷಕರನ್ನು ಕೇಳಿದಾಗ ಆಕೆಯ ಮೈಮೇಲೆ ದೆವ್ವ ಬರುತ್ತಿತ್ತು, ಅನೇಕ ದೆವ್ವಗಳು ಆಕೆಯನ್ನು ಕಾಡುತ್ತಿವೆ. ಹಾಗಾಗಿ ತಾಂತ್ರಿಕರ ಸಹಾಯ ಪಡೆದು ಆ ಸರಪಳಿಯನ್ನು ಹಾಕಿರುವುದಾಗಿ ಹೇಳಿದ್ದಾರೆ,10 ದೇಹಗಳು ಆಕೆಯನ್ನು ಬಿಟ್ಟು ಹೋಗಿದ್ದು, ಇದೀಗ 11ನೇ ಬೀಗವನ್ನು ತೆರೆಯುವುದು ಬಾಕಿ ಇದೆ ಎಂದು ಪೋಷಕರು ತಿಳಿಸಿದ್ದಾರೆ.
ನಂತರ ಮಹಿಳಾ ಅಭ್ಯರ್ಥಿಯನ್ನು ಭದ್ರತಾ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲಿಸಿ. ಯಾವುದೇ ಸಾಧನ ಪತ್ತೆಯಾಗದಿದ್ದಾಗ, ವಿಶೇಷ ಕಣ್ಗಾವಲು ಕೈಗೊಳ್ಳಲು ಕೊಠಡಿ ಇನ್ಸ್‌ಪೆಕ್ಟರ್‌ಗೆ ಸೂಚಿಸಲಾಯಿತು. ಮಹಿಳಾ ಅಭ್ಯರ್ಥಿ ಕಟ್ಟುನಿಟ್ಟಾದ ಕಣ್ಗಾವಲು ಅಡಿಯಲ್ಲಿ ಪರೀಕ್ಷೆಯನ್ನು ಬರೆದಿದ್ದಾರೆ ಇದೀಗ ಈ ವಿಚಾರ ಎಲ್ಲೆಡೇ ಭಾರಿ ಸುದ್ದಿಯಾಗಿದೆ.
Poll (Public Option)

Post a comment
Log in to write reviews