2024-12-24 07:18:59

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಈರುಳ್ಳಿ - ಬೆಳ್ಳುಳ್ಳಿಯಿಂದ ವಿರಾಟ್‌ ಕೊಹ್ಲಿ ಚಿತ್ರ ಬಿಡಿಸಿದ ಅಭಿಮಾನಿ

ಟೀಂ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಅವರನ್ನು ಅಭಿಮಾನಿಯೊಬ್ಬ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಮೂಡುವಂತೆ ಮಾಡಿದ್ದಾನೆ.

ಅಪ್ರತಿಮ ಕ್ರಿಕೆಟಿಗನ ಅಭಿಮಾನಿಯೊಬ್ಬ ಖಾಲಿ ಜಾಗದಲ್ಲಿ ಮೊದಲು ವಿರಾಟ್​ರ ಚಿತ್ರ ಮೂಡುವಂತೆ ರೇಖೆಗಳನ್ನು ಗೀಚಿದ್ದಾನೆ. ಬಳಿಕ ರೇಖೆಗಳುದ್ದಕ್ಕೂ ಬೆಳ್ಳುಳ್ಳಿ, ಈರುಳ್ಳಿಯನ್ನು ಜೋಡಿಸಿದ್ದಾನೆ. ಇದು ಥೇಟ್​ ವಿರಾಟ್​ರಂತೆ ಕಾಣುವಂತೆ ಮಾಡಿದ್ದಾನೆ.

ಇದು ನೋಡುಗರನ್ನು ಬೆರಗಾಗುವಂತೆ ಮಾಡಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಜೋಡಿಸಿದ ಬಳಿಕ ದೂರದಿಂದ ಅದನ್ನು ನೋಡಿದಾಗ ಕೊಹ್ಲಿಯ ಚಿತ್ರವೇ ಅಲ್ಲಿ ಕಾಣುತ್ತದೆ. ಇದರ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗುತ್ತಿದೆ.

ಈ ಚಿತ್ರವನ್ನ ಬಿಡಿಸಿದ ಅಭಿಮಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲವಾದರೂ, ತನುಜ್​ ಸಿಂಗ್​ ಎಂಬ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿರಾಟ್​ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಚಿತ್ರ ಬಿಡಿಸಿದ್ದಾನೆ. ವಿರಾಟ್​ ಕೊಹ್ಲಿ ಎಂದರೆ ಭಾವನಾತ್ಮಕ ಸಂಬಂಧ ಎಂದು ಬರೆದುಕೊಂಡಿದ್ದಾನೆ.

Post a comment

No Reviews