
ಕನ್ನಡದಲ್ಲಿ ಪ್ರೇಮಲೋಕ ಸೃಷ್ಟಿಸಿ ಸಂಚಲನ ಉಂಟು ಮಾಡಿದ್ದ, ವಿ.ರವಿಚಂದ್ರನ್ ಅವರು (ಮೇ 30) ಗುರುವಾರ 63ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಬಣ್ಣದ ಲೋಕದಲ್ಲಿ ಬಾಲ ನಟನಾಗಿ ಗುರುತಿಸಿಕೊಂಡಿದ್ದ ರವಿಚಂದ್ರನ್ ಅವರು 1982 ರಲ್ಲಿ ನಾಯಕನಟನಾಗಿ ಬಡ್ತಿ ಪಡೆದರು. ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡ ಇವರಿಗೆ ಅಭಿಮಾನಿಗಳಿಂದ ಹುಟ್ಟು ಹಬ್ಬದ ಶುಭಾಷಯ ಹರಿದು ಬರುತ್ತಿದೆ.
Poll (Public Option)

Post a comment
Log in to write reviews