ಶಾಲೆಗೆ ಸೇರುಸುದಾಗಿ ಬಾಲಕರಿಗೆ ಚಿತ್ರಹಿಂಸೆ ಕೊಡುತ್ತಿದ್ದ ದಂಪತಿಗೆ 11 ವರ್ಷ ಜೈಲು

ನವದೆಹಲಿ : ಶಾಲೆಗೆ ಸೇರಿಸಲು ಸಹಾಯ ಮಾಡುವುದಾಗಿ ಹೇಳಿ ಭಾರತದಿಂದ ಅಮೆರಿಕಕ್ಕೆ ಬಾಲಕನೊಬ್ಬನನ್ನು ಕರೆತಂದು ಜೀತಕ್ಕಿಟ್ಟಿದ್ದ ದಂಪತಿಗೆ ಅಮೆರಿಕ ನ್ಯಾಯಾಲಯವು 11 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಬಾಲಕನಿಗೆ 1.8 ಕೋಟಿ ರೂ. ಪರಿಹಾರ ನೀಡುವಂತೆ ಸೂಚಿಸಿದೆ.
ಹರ್ಮನ್ ಪ್ರೀತ್ ಸಿಂಗ್ (31) 11 ವರ್ಷ ಜೈಲು ಹಾಗು ಕುಲಬೀರ್ ಕೌರ್ಗೆ( 43) 7 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.
ಬಾಲಕನಿಗೆ ಅಮೆರಿಕಾದಲ್ಲಿ ಒಳ್ಳೆಯ ಶಾಲೆಗೆ ಸೇರಿಸುವುದಾಗಿ ತಮ್ಮದೇ ಸಂಬಂಧಿಯ ಹುಡುಗನ್ನು ಅಮೇರಿಕಕ್ಕೆ ಕರೆತಂದಿದ್ದರು. ಆದರೆ ಈ ದಂಪತಿ ಪೆಟ್ರೋಲ್ ಬಂಕ್‌ನಲ್ಲಿ ಬಾಲಕನನ್ನು ಕೆಲಸಕ್ಕಿಟ್ಟಿದ್ದರು. ಕಳೆದ ಮೂರು ವರ್ಷಗಳಿಂದ ಬಾಲಕ ಗ್ಯಾಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ, ಅಷ್ಟೇ ಅಲ್ಲದೆ ಅವರು ಬಾಲಕನ ವಲಸೆ ದಾಖಲೆಗಳನ್ನು ಕೂಡ ತಮ್ಮ ಬಳಿ ಇರಿಸಿಕೊಂಡಿದ್ದರು. ಹಾಗೆಯೇ ನಿನಗೆ ಹಣ ಬೇಕೆಂದರೆ ದಿನಕ್ಕೆ 12 ರಿಂದ 17 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಹೆದರಿಸುತ್ತಿದ್ದರು ಅಷ್ಟೇ ಅಲ್ಲದೆ ದೈಹಿಕವಾಗಿ ಮಾನಸಿಕವಾಗಿ ಕಷ್ಟ ಕೊಟ್ಟಿದ್ದರು. ಪೆಟ್ರೋಲ್ ಬಂಕ್‌ನಲ್ಲಿ ಶುಚಿಗೊಳಿಸುವುದು, ಅಡುಗೆ ಮಾಡುವುದು, ಪೆಟ್ರೋಲ್ ಬಂಕ್‌ನ ದಾಖಲೆ ನಿರ್ವಹಣೆ ಸೇರಿದಂತೆ ಕೆಲವು ಕೆಲಸಗಳನ್ನು ಬಾಲಕನಿಂದ ಮಾಡಿಸುತ್ತಿದ್ದರು ಎಂದು ತಿಳಿದು ಬಂದಿದೆ.
Poll (Public Option)

Post a comment
Log in to write reviews