2024-12-24 07:01:49

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮಗುವನ್ನು ಬಿಟ್ಟು ಮದುವೆಗೆ ಹೋದ ದಂಪತಿಗಳು : ನರಳಾಡಿ ಪ್ರಾಣಬಿಟ್ಟ ಕಂದಮ್ಮ

ನಗರದ ಕೋಟದಲ್ಲಿ ಕಾರಿನಲ್ಲೇ ಮಗುವನ್ನು ಮರೆತು ದಂಪತಿ ಮದುವೆಗೆ ತೆರಳಿದ್ದು ಮಗು ನರಳಿ ನರಳಿ ಕಾರಿನಲ್ಲೆ ಪ್ರಾಣ ಬಿಟ್ಟಿರುವ ದಾರುಣ ಘಟನೆ ನಡೆದಿದೆ.

ಮದುವೆ ಮನೆಗೆ ತೆರಳುತ್ತಿದ್ದಂತೆ ಸಂಬಂಧಿಕರು ಮಾತನಾಡಿಸಿದ್ದಾರೆ. ಈ ವೇಳೆ ಪತಿ ಪ್ರದೀಪ್ ಪಾರ್ಕಿಂಗ್‌ ಸ್ಥಳದಲ್ಲಿ ಕಾರು ನಿಲ್ಲಿಸಿ ತನ್ನ ಪತ್ನಿ ಮತ್ತು ಹಿರಿಯ ಮಗಳು ಕಾರಿನಿಂದ ಇಳಿದು ಮದುವೆಗೆ ತೆರಳಿದ್ದಾರೆ. ಆದರೆ ಇತ್ತ ಹಿಂದಿನ ಸೀಟ್‌ನಲ್ಲಿ ಮಲಗಿದ್ದ 3 ವರ್ಷದ ಕಂದಮ್ಮನ ಅರಿವೇ ಇಲ್ಲದೆ ಸಮಾರಂಭಕ್ಕೆ ತೆರಳಿದ್ದಾರೆ. ಸುಮಾರು 2 ಗಂಟೆಗಳ ನಂತರ ಮಗುವಿನ ನೆನೆಪಾಗಿ ಇಡೀ ಮದುವೆ ಮನೆಯ ಶೋಧ ನಡೆಸಿದ್ದಾರೆ. ನಂತರ ತಕ್ಷಣ ಕಾರಿನ ಬಳಿ ಬಂದಾಗ ಮಗು ಗೌರವಿಕಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಮೃತಪಟ್ಟಿದ್ದಾಳೆ ಎಂದು ತಿಳಿಸಿದರು. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Post a comment

No Reviews