
ಬಾಗಲಕೋಟೆ: ಹುಲಿಗೆಮ್ಮ ದೇವಿ ದರ್ಶನ ಮುಗಿಸಿಕೊಂಡು ಬರುರುವಾಗ ಕಾರು ಮತ್ತು ಲಾರಿ ಭೀಕರವಾಗಿ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಹುನಗುಂದ ತಾಲೂಕಿನ ಧನ್ನೂರ ಟೋಲ್ ನಾಕಾ ಬಳಿ ನಡೆದಿದೆ.
ಕಾರಿನಲ್ಲಿದ್ದ ಲಕ್ಷ್ಮಣ ವಡ್ಡರ (55), ಬೈಲಪ್ಪ ಬಿರಾದಾರ (45), ರಾಮಣ್ಣ ನಾಯಕಮಕ್ಕಳ (50), ಕಾರು ಚಾಲಕ ಮೊಹಮ್ಮದ್ ರಫೀಕ್ ಗುಡ್ನಾಳ (25) ಮೃತಪಟ್ಟವರು. ಇವರೆಲ್ಲ ವಿಜಯಪುರದ ಮುದ್ದೇಬಿಹಾಳ ಮೂಲದವರು ಎಂದು ತಿಳಿದು ಬಂದಿದೆ.
ನಾಲ್ವರು ಕಾರಿನಲ್ಲಿ ಹುಲಿಗೆಮ್ಮ ದೇವಿ ದರ್ಶನ ಪಡೆದುಕೊಂಡು ವಾಪಸ್ ಊರಿಗೆ ತೆರಳುತ್ತಿದ್ದರು. ಹುನಗುಂದ ಮೂಲಕ ಮುದ್ದೇಬಿಹಾಳಕ್ಕೆ ಹೋಗುವಾಗ ಧನ್ನೂರ ಟೋಲ್ ನಾಕಾ ಬಳಿ ಬೆಳಗಿನ ಜಾವ ಇವರ ಕಾರು ಹಾಗೂ ಲಾರಿ ನಡುವೆ ಭಯಾನಕವಾದ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
Poll (Public Option)

Post a comment
Log in to write reviews