
ಮಹಾರಾಷ್ಟ್ರ: ಬಸ್‌ವೊಂದು 60-70 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 55-60 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ದುರಂತ ಸಂಭವಿಸಿದೆ.
ಸ್ಥಳೀಯ ನಿವಾಸಿಗಳು, ಚಿಕಲ್ದಾರ ಪೊಲೀಸರ ನೆರವಿನೊಂದಿಗೆ ತಕ್ಷಣ ಗಾಯಾಳುಗಳನ್ನು ಅಮರಾವತಿ ಆಸ್ಪತ್ರೆಗೆ ಸೇರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯು ತ್ವರಿತಗತಿಯಲ್ಲಿ ಸಾಗಿದೆ, ಆದರೆ ಗಂಭೀರ ಗಾಯಾಳುಗಳ ಸಂಖ್ಯೆ ಹೆಚ್ಚಿದ್ದು ಆತಂಕ ಹೆಚ್ಚಾಗಿದೆ.
Poll (Public Option)

Post a comment
Log in to write reviews