
ರಾಯಚೂರು (ಆ.26): ಕೃಷ್ಣಜನ್ಮಾಷ್ಟಮಿಯ ವಿಶೇಷವಾಗಿ ರಾಯಚೂರು ಜಿಲ್ಲೆಯ ನಳಿನಿ ನವೀನ್ ಕುಮಾರ್ ಎಂಬುವವರು ಪೆನ್ಸಿಲ್‌ನಲ್ಲಿ ಬಾಲ ಕೃಷ್ಣನ ಕೆತ್ತನೆ ಮಾಡಿ ಗಮನ ಸೆಳೆದಿದ್ದಾರೆ.
ಕೃಷ್ಣಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನು ಪೂಜಿಸಲಾಗುತ್ತದೆ. 'ಸಂತೋಷವು ಹೊರಗೆ ಎಲ್ಲೂ ಇಲ್ಲ, ಅದು ಮನಸ್ಸಿನಲ್ಲಿದೆ ಎಂಬ ಶ್ರೀಕೃಷ್ಣ ಮಾತಿನಂತೆ ಲಿಂಗಸುಗೂರು ಪಟ್ಟಣದ ನಿವಾಸಿಯಾಗಿರುವ ನಳಿನಿ ಗೃಹಿಣಿಯಾಗಿದ್ದುಕೊಂಡು ಸೂಕ್ಷ್ಮ ಕಲಾಕೃತಿ ರಚಿಸುವುದರಲ್ಲಿ ತೊಡಗಿದ್ದಾರೆ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಒಂದು ಪೆನ್ಸಿಲ್‌ನಲ್ಲಿ 1ಮಿಲಿ ಮೀಟರ್ ಅಗಲ ಹಾಗೂ 1 ಸೆಮೀ ಎತ್ತರದ ಶ್ರೀಕೃಷ್ಣನ ಕಲಾಕೃತಿ ರಚಿಸಿದ್ದಾರೆ. ಇದಕ್ಕಾಗಿ ಅವರು ನಾಲ್ಕು ಗಂಟೆಗಳ ಕಾಲ ಶ್ರೀಕೃಷ್ಟನ ಧ್ಯಾನಿಸುತ್ತಲೇ ಅತ್ಯಂತ ಸುಂದರವಾದ ಬಾಲಕೃಷ್ಣನ ಕಲಾಕೃತಿ ಕೆತ್ತನೆ ಮಾಡಿದ್ದಾರೆ. ಅಂದಹಾಗೆ ಇದು ನಳಿನಿಯವರ 104ನೇ ಸೂಕ್ಷ್ಮ ಕಲಾಕೃತಿಯಾಗಿದೆ. ಜಗತ್ತಿನಾದ್ಯಂತ ಶ್ರೀಕೃಷ್ಣನನ್ನು ಒಬ್ಬೊಬ್ಬರು ಒಂದೊಂದು ರೀತಿ ಆರಾಧಿಸುತ್ತಾರೆ, ನಳಿನಿ ಸೂಕ್ಷ್ಮ ಕೆತ್ತನೆ ಮಾಡುತ್ತಲೇ ಧ್ಯಾನಿಸಿದಂತೆ ಕಲಾಕೃತಿ
Poll (Public Option)

Post a comment
Log in to write reviews