
ದಾವಣಗೆರೆ: ಲಾಡ್ಜ್ ನಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ನಡೆದಿದೆ.
ಐಡಿಎಫ್‌ಸಿ ಉದ್ಯೋಗಿ ಸಂತೋಷ್ ಎಂ (40) ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ತಿಳಿದು ಬಂದಿದೆ
ಬೆಂಗಳೂರಿನಲ್ಲಿ ಐಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಆಗಿದ್ದ ಸಂತೋಷ್ ಅವರಿಗೆ ಕೆಲ ದಿನಗಳ ಹಿಂದೆ ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅನಾರೋಗ್ಯ ಕಾರಣ ಸಂತೋಷ್ ಅವರು ಕರ್ನಾಟಕದಲ್ಲೇ ಇರಲು ಬಯಸಿದ್ದರು.ಹೀಗಾಗಿ ಐಡಿಎಫ್‌ಸಿ ಬ್ಯಾಂಕ್ ಮುಖ್ಯಸ್ಥರು 2 ದಿನಕ್ಕಾಗಿ ಹೊಸರ್ದುಗಕ್ಕೆ ಕಳಿಸಿದ್ದರು. ಸಂತೋಷ್ ಅವರು ಹೊಸದುರ್ಗದ ಐಡಿಎಫ್‌ಸಿ ಬ್ಯಾಂಕ್ ಕಟ್ಟಡದ ಮೇಲ್ಭಾಗದಲ್ಲಿನ ಲಾಡ್ಜ್ ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್‌ನಲ್ಲಿ ಬ್ಯಾಂಕ್ ಮೇಲಾಧಿಕಾರಿಗಳ ಕಿರುಕುಳ ವಿವರಿಸಿದ್ದಾರೆ ಇದಲ್ಲದೆ ಐಡಿಎಂಫ್‌ಸಿ ಬ್ಯಾಂಕ್ ನನ್ನ ಸಾವಿಗೆ ಪರಿಹಾರ ನೀಡಬೇಕೆಂದು ನಮೂದಿಸಿದ್ದಾರೆ ಲಂಚ ನೀಡಿದರೆ ಮಾತ್ರ ಕೆಲಸ ಆಗುತ್ತದೆಂದು ಆರೋಪಿಸಿದ್ದಾರೆ.
ಘಟನ ಸ್ಥಳಕ್ಕೆ ಹೊಸದುರ್ಗ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಯುತ್ತಿದೆ.
Poll (Public Option)

Post a comment
Log in to write reviews