
ಹಾವೇರಿ: ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿದ್ದು, 12 ವರ್ಷದ ಬಾಲಕನೊಬ್ಬ ಮಳೆ ನೀರು ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಗರದ ಎಸ್ಪಿ ಕಚೇರಿ ಮುಂಭಾಗ ನಡೆದಿದೆ.
ಕಣ್ಮರೆಯಾದ ಬಾಲಕ ಶಿವಾಜಿನಗರದ ನಿವಾಸಿ ನಿವೇದನ್ ಗುಡಗೇರಿ ಎಂದು ತಿಳಿದುಬಂದಿದೆ.
ವೇದು ಸ್ನೇಹಿತರೊಂದಿಗೆ ಸೇರಿಕೊಂಡು ಮಳೆ ನೀರಿನಲ್ಲಿ ಆಟವಾಡುತ್ತಿದ್ದನು. ಈ ವೇಳೆ ರಭಸವಾಗಿ ಹರಿಯುತ್ತಿದ್ದ ರಾಜಕಾಲುವೆಯ ಚರಂಡಿ ನೀರಿನಲ್ಲಿ ಸಿಲುಕಿ ಕಣ್ಮರೆಯಾಗಿದ್ದು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೋಲಿಸ್ ದೌಡಾಯಿಸಿದ್ದಾರೆ.
ಕಾರ್ಯಚರಣೆಯ ಬಳಿಕ ಬಾಲಕ ಪತ್ತೆಯಾಗಿದ್ದು, ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ವೈದ್ಯರು ನೀಡಿದ ಚಿಕಿತ್ಸೆ ಫಲಿಸದೆ ಬಾಲಕ ಮೃತ ಪಟ್ಟಿದ್ದಾನೆ.
Poll (Public Option)

Post a comment
Log in to write reviews