
ಅಯೋಧ್ಯೆಯಲ್ಲಿ ಬಾಲರಾಮನ ಸೃಷ್ಟಿಕರ್ತ ಅರುಣ್ ಯೋಗಿರಾಜ್ ಅವರ ಕೈಚಳಕದಿಂದ ಮತ್ತೊಂದು ಅದ್ಬುತ ಶಿಲ್ಪ ಮೂಡಿಬಂದಿದ್ದು, ಅಮರನಾಥ ಬಳಿ ನಂದಿ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ.
ಕಾಶ್ಮೀರದ ಅಮರನಾಥ ಜ್ಯೋತಿರ್ಲಿಂಗಕ್ಕೆ ನಂದಿಯ ಮೂರ್ತಿಯನ್ನು ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಮೂರು ಅಡಿ ಎತ್ತರದ ಕೃಷ್ಣ ಶಿಲೆಯಿಂದ ಈ ನಂದಿ ವಿಗ್ರಹವನ್ನು ಅರುಣ್ ಯೋಗಿರಾಜ್ ಅಂತಿಮ ಸ್ಪರ್ಶ್ ನೀಡುತ್ತಿದ್ದಾರೆ. ಅಮರನಾಥ ಹಿಂದೂಗಳ ಪವಿತ್ರ ಯಾತ್ರಾಸ್ಥಳ. ಅಮರನಾಥದ ಉದ್ಭವ ಲಿಂಗದ ಮುಂದೆ ಈ ನಂದಿಯ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ನಂದಿಯ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ ಶಿಲ್ಪಿ. ಶಿವಲಿಂಗದ ಮುಂಭಾಗ ವಿರಾಜಮಾನವಾಗಲಿರುವ ನಂದಿ ವಿಗ್ರಹ ಜೂನ್ ಅಂತ್ಯದಲ್ಲಿ ಪ್ರತಿಷ್ಠಾಪನೆಯಾಗುವ ಸಾಧ್ಯತೆ ಇದೆ.
Poll (Public Option)

Post a comment
Log in to write reviews