ಬೆಂಗಳೂರು: ನಾಗಸಂದ್ರ ಹಾಗೂ ಮಾದಾವರ ನಡುವಿನ ಹೊಸ ರೈಲು ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ಹಿನ್ನಲೆಯಲ್ಲಿ ಇಂದು ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಸವಾಗಲಿದೆ. ನಾಗಸಂದ್ರ ಹಾಗೂ ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ 10 ಗಂಟೆಯಿಂದ 2 ಗಂಟೆವರೆಗೆ ವಾಣಿಜ್ಯ ಸೇವೆ ಸ್ಥಗಿತವಾಗಲಿದೆ.
ಈ ಅವಧಿಯಲ್ಲಿ ಪೀಣ್ಯ ಹಾಗೂ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಎಂದಿನಂತೆ ಸಂಚರಿಸಲಿದೆ.
ನೇರಳೆ ಮಾರ್ಗದ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಹಸಿರು ಮಾರ್ಗದಲ್ಲಿ ವಿಸ್ತರಿತಗೊಂಡಿರುವ 3.7 ಕಿ.ಮೀ ದೂರದ ಈ ಮಾರ್ಗದಲ್ಲಿ ಚಿಕ್ಕಬಿದರಕಲ್ಲು , ಮಾದಾವರ ಮೆಟ್ರೊ ನಿಲ್ದಾಣಗಳಿವೆ. ಸಿವಿಲ್ ಕಾಮಗಾರಿ ಬಳಿಕ ಆಗಸ್ಟ್ನಿಂದ ಸಾಮರ್ಥ್ಯ ಪರೀಕ್ಷೆ, ಸಿಗ್ನಲಿಂಗ್, ದೂರಸಂಪರ್ಕ, ವಿದ್ಯುತ್ ಸರಬರಾಜು ವ್ಯವಸ್ಥೆ ಸಿಸ್ಟಂ ಸಂಯೋಜನೆ, ಸಾಮರ್ಥ್ಯ ಪರಿಶೀಲನೆ ಪ್ರಮುಖ ಪರೀಕ್ಷೆಗಳು ನಡೆದಿತ್ತು.
Post a comment
Log in to write reviews