2024-12-24 07:36:13

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

9 ದಿನದ ಹಸುಗೂಸಿಗೆ ವಿಷ ಹಾಕಿ ಕೊಂದ ಪಾಪಿ ಪೋಷಕರು

ಚೆನ್ನೈ:- ಎರಡನೆಯದು ಹೆಣ್ಣು ಮಗುವಾಯಿತು ಎಂದು ಪೋಷಕರು ತಮ್ಮ 9 ದಿನದ ಹಸುಗೂಸಿಗೆ ವಿಷ ಹಾಕಿ ಹತ್ಯೆ ಮಾಡಿ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.

ಮೊದಲನೆಯದ್ದು ಹೆಣ್ಣುಮಗುವಿತ್ತು, ಈಗ ಎರಡನೆಯದೂ ಹೆಣ್ಣಾಗಿದೆ. ಅದು ತಮಗೆ ಬೇಡ ಎಂದು ಎರಡನೆ ಹೆಣ್ಣು ಮಗುವಿಗೆ ವಿಷ ಉಣಿಸಿ ಕೊಲೆ ಮಾಡಿದ್ದ ಪಾಪಿ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ಎರಡು ವರ್ಷದ ಮಗಳನ್ನು ಹೊಂದಿರುವ ಜೀವಾ ಮತ್ತು ಡಯಾನಾ ದಂಪತಿಗೆ ಆ. 27ರಂದು ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಡಯಾನಾ ಹೆರಿಗೆಯ ಸಮಯದಲ್ಲಿ ತೊಂದರೆಯಾದ ಕಾರಣ ವೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಡಿಸ್ಚಾರ್ಜ್‌ ಆಗಿ ಮನೆಗೆ ಮರಳಿದ ದಂಪತಿ ತಮ್ಮಗೆ ಇಷ್ಟವಿಲ್ಲದ ನವಜಾತ ಶಿಶುವಿಗೆ ವಿಷಪೂರಿತ ಹಾಲನ್ನು ಕುಡಿಸಿ ಮಗುವನ್ನು ಕೊಂದಿದ್ದಾರ. ನಂತರ ಯಾವುದೇ ಸಂಬಂಧಿಕರಿಗೆ ತಿಳಿಸದೆ ಮಗುವಿನ ಶವವನ್ನು ತಮ್ಮ ಹಿತ್ತಲಿನಲ್ಲಿಯೇ ಹೂತಿದ್ದರು.

ಡಯಾನಾ ತನ್ನ ತಂದೆಗೆ ಕರೆ ಮಾಡಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಮೃತಪಟ್ಟಿದೆ ಎಂದು ಹೇಳಿದ್ದಾಳೆ. ಆಗ ಅವರ ತಂದೆಗೆ ಅನುಮಾನ ಬಂದಿದೆ, ಮಗುವಿನ ಅನುಮಾನಾಸ್ಪದ ಸಾವಿನ ಕುರಿತು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಆಗಮಿಸಿ ತನಿಖೆ ನಡೆಸಿದಾಗ ದಂಪತಿ ಮನೆಯಿಂದ ಪರಾರಿಯಾಗಿರುವುದು ಕಂಡು ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿ ಸಮುಖದಲ್ಲಿ ಸೆ.5ರಂದು ಮಗುವಿನ ಮತದೇಹವನ್ನು ಅಧಿಕಾರಿಗಳು ಹೊರತೆಗೆದಿದ್ದಾರೆ.

ಪೋಷಕರನ್ನು ಪತ್ತೆಹಚ್ಚಲು ವೆಲ್ಲೂರು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದರು ಮತ್ತು ಅಂತಿಮವಾಗಿ ಇಬ್ಬರೂ ಶಂಕಿತರನ್ನು ಬಂಧಿಸಲಾಯಿತು. ತನಿಖೆ ಮುಂದುವರಿದಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Post a comment

No Reviews