ಕ್ರೀಡೆ
8ನೇ ರಾಷ್ಟ್ರಮಟ್ಟದ ಲಗೋರಿ ಚಾಂಪಿಯನ್ ಶಿಪ್ : 26ಕ್ಕೆ ಕರ್ನಾಟಕ ಲಗೋರಿ ಜ್ಯೂನಿಯರ್ ಬಾಲಕ ಮತ್ತು ಬಾಲಕಿಯರ ತಂಡದ ಆಯ್ಕೆ

ಬೆಂಗಳೂರು: ದೇಶೀಯ ಕ್ರೀಡೆ ಲಗೋರಿಯನ್ನು ಉಳಿಸಿ ಬೆಳೆಸುವ ಉದ್ದೇಶದ ಮೇರೆಗೆ ಅಮೆಚೂರು ಲಗೋರಿ ಅಸೋಸಿಯೇಷನ್ ಆಫ್ ಕರ್ನಾಟಕ ಮುಂದಾಗಿದ್ದು, ದೇಶಿ ಆಟ ಲಗೋರಿ ಈಗಾಗಲೇ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಸ್ಥಾನ ಪಡೆದಿದೆ. ಬರುವ ವರ್ಷದಿಂದ ಖೇಲೋ ಇಂಡಿಯಾ ಕ್ರೀಡಾ ಕೂಟದಲ್ಲೂ ಲಗೋರಿ ಸ್ಥಾನ ಪಡೆಯಲಿದೆ. ಕರ್ನಾಟಕ ರಾಜ್ಯ ಲಗೋರಿ ಜ್ಯೂನಿಯರ್ ಬಾಲಕ ಮತ್ತು ಬಾಲಕಿಯರ ಆಯ್ಕೆ ಪ್ರಕ್ರಿಯೆಯನ್ನು ಇದೇ 26 ರಂದು ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ನಡೆಸಲಿದೆ. ಮಹಾರಾಷ್ಟ್ರದ ರತ್ನಗಿರಿಯ ಎಸ್.ವಿ.ಜೆ.ಸಿ.ಟಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ 8ನೇ ರಾಷ್ಟ್ರಮಟ್ಟದ ಲಗೋರಿ ಚಾಂಪಿಯನ್ ಶಿಪ್ ಜೂನ್ 28 ರಿಂದ 30 ರ ವರೆಗೆ ನಡೆಯಲಿದ್ದು, ರಾಜ್ಯವನ್ನು ಪ್ರತಿನಿಧಿಸುವ ಜ್ಯೂನಿಯರ್ ತಂಡವನ್ನು ಸರ್ಕಾರಿ ಕಲಾ ಕಾಲೇಜಿನ ಒಳಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಅರ್ಹ ಕ್ರೀಡಾಪಟುಗಳು ಭಾಗವಹಿಸಬಹುದು ಎಂದು ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ಟಿ ಮತ್ತು ಜಂಟಿ ಕಾರ್ಯದರ್ಶಿ ಎ. ಪರಮ ಶಿವಂ ತಿಳಿಸಿದ್ದಾರೆ.
Poll (Public Option)

Post a comment
Log in to write reviews