
ಕಾರವಾರ: ಅಂಕೋಲಾದ ಶಿರೂರಿನಲ್ಲಿ ಇತ್ತೀಚಿಗೆ ಸಂಭವಿಸಿದ್ದ ಗುಡ್ಡಕುಸಿತ ಘಟನೆಯಲ್ಲಿ ನಾಪತ್ತೆಯಾಗಿದ್ದ ಸಣ್ಣಿ ಹನುಮಂತ ಗೌಡ (57) ಎಂಬ ಮಹಿಳೆಯ ಶವ 8 ದಿನಗಳ ಬಳಿಕ ದೊರೆತಿದೆ.
ಇವರು ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪದಿಂದ ಕಾಣೆಯಾಗಿದ್ದರು.ನಾಪತ್ತೆಯಾದ 11 ಮಂದಿಯ ಪೈಕಿ 8 ಮೃತದೇಹಗಳು ಸಿಕ್ಕಿವೆ. ಕೇರಳದ ಲಾರಿ ಚಾಲಕ ಸೇರಿದಂತೆ ಇನ್ನೂ ಮೂವರಿಗೆ ಸೇನಾಪಡೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾಣೆಯಾದವಾರಿಗಾಗಿ ಶೋಧಕಾರ್ಯ ಮುಂದುವರಿದಿದೆ.
Poll (Public Option)

Post a comment
Log in to write reviews