
ಚಂಡೀಗಢ: ಗೂಡ್ಸ್ ರೈಲು ಹಳಿತಪ್ಪಿದ ಪರಿಣಾಮ 8 ಕಂಟೈನರ್‌ಗಳು ಹಳಿಗೆ ಬಿದ್ದು, ರೈಲು ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ನಡೆದಿದೆ.
ರೈಲು ಅಂಬಾಲಾದಿಂದ ದೆಹಲಿಗೆ ತೆರಳುತ್ತಿತ್ತು ಎಂದು ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಿಂದ ಎಂಟು ಕಂಟೈನರ್ ಗಳು ಹಳಿಗೆ ಬಿದ್ದಿವೆ. ಘಟನೆಗೆ ಕಾರಣಗಳನ್ನು ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರೈಲು ಅಂಬಾಲಾದಿಂದ ದೆಹಲಿಗೆ ತೆರಳುತ್ತಿದ್ದಾಗ ಕರ್ನಾಲ್ ನ ತಾರೋರಿ ಬಳಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Poll (Public Option)

Post a comment
Log in to write reviews