
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ನಡೆದ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ದೇಗುಲದ ಆನೆಯಿಂದ ವಿಶೇಷ ಧ್ವಜ ವಂದನೆ ನೆರವೇರಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಶಿಕ್ಷಣ ಸಂಸ್ಥೆಗಳ ವತಿಯಿಂದ ರಥಬೀದಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು.
ಸೇನಾಧಿಕಾರಿ ಸುಬೇದಾರ್ ಉದಯಚಂದ್ರ ಉಡುಪ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಕಟೀಲು ದೇವಳದ ಆನೆ ಮಹಾಲಕ್ಷ್ಮಿಯಿಂದ ವಿಶೇಷ ಧ್ವಜ ವಂದನೆ ನಡೆಯಿತು.
ಸುಬೇದಾರ್ ಉದಯಚಂದ್ರ ಉಡುಪ ಅವರಿಗೆ ಆನೆಯು ಧ್ವಜವನ್ನು ನೀಡಿ ವಂದನೆ ಸಲ್ಲಿಸಿತು. ಬಳಿಕ ಧ್ವಜಸ್ತಂಭದ ಮುಂದೆ ನಿಂತು ಮೂರು ಬಾರಿ ಘೀಳಿಟ್ಟು ಧ್ವಜ ವಂದನೆ ಮಾಡಿತು. ಈ ಅಪೂರ್ವ ದೃಶ್ಯಕ್ಕೆ ದೇವಸ್ಥಾನದ ಅರ್ಚಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಆಡಳಿತ ಮಂಡಳಿ ಸೇರಿದಂತೆ ಇತರರು ಸಾಕ್ಷಿಯಾದರು.
Poll (Public Option)

Post a comment
Log in to write reviews