ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ 750 ಕೋಟಿ ರೂ ವೆಚ್ಚದಲ್ಲಿ ಬೃಹತ್ ಮ್ಯೂಸಿಯಂ ಸ್ಥಾಪಿಸಲು ಟಾಟಾ ಸನ್ಸ್ ಸಂಸ್ಥೆ ಮುಂದಾಗಿದೆ.
ಟಾಟಾ ಸನ್ಸ್‌ನ ಈ ಮನವಿಗೆ ಉತ್ತರ ಪ್ರದೇಶ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಈ ಯೋಜನೆಗಾಗಿ ದೊಡ್ಡ ಮೊತ್ತದ ಹಣವನ್ನು ತೆಗೆದಿಟ್ಟಿದ್ದು, ಸುಮಾರು 750 ಕೋಟಿ ರೂಪಾಯಿಯನ್ನು ಈ ಮಹತ್ವಾಕಾಂಕ್ಷಿ ಯೋಜನೆಗಳಿಗೆ ವೆಚ್ಚ ಮಾಡಲಿದೆ. ಅದರಲ್ಲಿ 650 ಕೋಟಿಯನ್ನು ಮೂಲಭೂತ ಸೌಕರ್ಯ, ಡಿಸೈನ್ ಹಾಗೂ ಇಂಟಿರಿಯರ್ ಕೆಲಸಗಳಿಗಾಗಿ ವಿನಿಯೋಗಿಸಲಿದೆ. ಉಳಿದ 100 ಕೋಟಿಯನ್ನು ಕಟ್ಟಡ ನಿರ್ಮಾಣವಾದ ಸ್ಥಳದ ಅಭಿವೃದ್ಧಿಗೆ ವಿನಿಯೋಗಿಸಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಟಾಟಾ ಸನ್ಸ್‌ನ ಈ ದೇಗುಲ ವಸ್ತುಸಂಗ್ರಹಾಲಯದ ನಿರ್ಮಾಣಕ್ಕೆ ಪ್ರತಿಯಾಗಿ ಉತ್ತರ ಪ್ರದೇಶ ಸರ್ಕಾರವೂ ಟಾಟಾ ಸನ್ಸ್‌ಗೆ ಮ್ಯೂಸಿಯಂ ನಿರ್ಮಿಸುವ ಭೂಮಿಯನ್ನು 90 ವರ್ಷಗಳಿಗೆ ಕೇವಲ 1 ರೂಪಾಯಿಗೆ ಲೀಸ್‌ಗೆ ನೀಡಲಿದೆ. ಇನ್ನು ಈ ಮ್ಯೂಸಿಯಂ ನಿರ್ಮಾಣಕ್ಕೆ ನೀಡಲಾಗುತ್ತಿರುವ ಭೂಮಿಯೂ ಪ್ರವಾಸೋದ್ಯಮ ಇಲಾಖೆಗೆ ಸೇರಿದ್ದು, ಸರಾಯು ನದಿಗೆ. ಮೀಪದಲ್ಲಿರುವ ಮಜ್ಹಾ ಜಮ್ಥಾರ್ ಗ್ರಾಮವನ್ನು ಮ್ಯೂಸಿಯಂ ನಿರ್ಮಾಣಕ್ಕಾಗಿ ಖಾಸಗಿ ಸಂಸ್ಥೆಗೆ ನೀಡಲಾಗುತ್ತದೆ. ಅಧಿಕಾರಿಗಳು ಹೇಳುವ ಪ್ರಕಾರ ಇದು 25 ಎಕರೆಯಷ್ಟು ವಿಸ್ತಾರವಾದ ಭೂಮಿಯಾಗಿದೆ. ಇದನ್ನು ಟಾಟಾ ಸನ್ಸ್‌ಗೆ ಹಸ್ತಾಂತರಿಸಲಾಗುತ್ತದೆ ಇದಕ್ಕೆ ಸಂಬಂಧಿಸಿದಂತೆ ಒಪ್ಪಂದಗಳು ಹಾಗೂ ಷರತ್ತುಗಳಿಗೆ ಒಪ್ಪಂದ ಪ್ರತಿಗೆ ಸರ್ಕಾರ ಹಾಗೂ ಟಾಟಾ ಸನ್ಸ್ ಸಹಿ ಹಾಕಲಿದ್ದಾರೆ. ಟಾಟಾ ಸನ್ಸ್‌ನ ನೀಲಿ ನಕ್ಷೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಕೇಂದ್ರ ಸರ್ಕಾರವೂ ಅದನ್ನು ಅಂತಿಮ ನಿರ್ಧಾರಕ್ಕಾಗಿ ರಾಜ್ಯ ಸರ್ಕಾರದ ಅನುಮತಿಗೆ ಕಳುಹಿಸಿತ್ತು ಎಂದು ಹೇಳಿದ್ದಾರೆ.
Post a comment
Log in to write reviews