
ನವ ದೆಹಲಿ: ನಿನ್ನೆ ಸಂಜೆಯಷ್ಟೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿ ನೇತೃತ್ವದ ಹೊಸ ಎನ್ ಡಿಎ ಸರ್ಕಾರದಲ್ಲಿ ಇಬ್ಬರು ಸಂಪುಟ ದರ್ಜೆ ಸಚಿವರು ಸೇರಿದಂತೆ ಏಳು ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ ಗೆ ಸೇರ್ಪಡೆಗೊಂಡಿದ್ದಾರೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್ ನಲ್ಲಿ ಹತ್ತು ಮಹಿಳೆಯವರಿಗೆ ಸ್ಥಾನವನ್ನು ನೀಡಲಾಗಿತ್ತು. ಆದರೆ ಈ ಬಾರಿ ಮಹಿಳಾ ಸಚಿವರ ಸಂಖ್ಯೆ ಏಳಕ್ಕೆ ಇಳಿಕೆಯಾಗಿದ್ದು ಕಳೆದ ಸಂಪುಟದಲ್ಲಿ ಸಚಿವರಾಗಿದ್ದ ಸ್ಮೃತಿ ಇರಾನಿ, ಮಾಜಿ ರಾಜ್ಯ ಸಚಿವೆ ಡಾ ಭಾರತಿ ಪವಾರ್, ಸಾಧ್ವಿ ನಿರಂಜನ್ ಜ್ಯೋತಿ, ದರ್ಶನಾ ಜರ್ದೋಶ್, ಮೀನಾಕ್ಷಿ ಲೇಖಿ ಮತ್ತು ಪ್ರತಿಮಾ ಭೂಮಿಕ್ ಮೊದಲಾದ ಮಹಿಳಾ ಮಣಿಗಳನ್ನು ಈ ಬಾರಿ ಕೈಬಿಡಲಾಗಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಮಾಜಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಜೆಪಿ ಸಂಸದರಾದ ಅನ್ನಪೂರ್ಣ ದೇವಿ, ಕರ್ನಾಟಕದ ಶೋಭಾ ಕರಂದ್ಲಾಜೆ, ರಕ್ಷಾ ಖಡ್ಸೆ, ಸಾವಿತ್ರಿ ಠಾಕೂರ್ ಮತ್ತು ನಿಮುಬೆನ್ ಬಂಬಾನಿಯಾ ಹಾಗೂ ಅಪ್ನಾ ದಳದ ಸಂಸದೆ ಅನುಪ್ರಿಯಾ ಪಟೇಲ್ ಮೊದಲಾದ 7 ಮಹಿಳೆಯರು ಮೋದಿ 3.0 ಸಂಪುಟಕ್ಕೆ ಸೇರ್ಪಡೆಗೊಂಡು ಪ್ರಮಾಣವಚನ ಸ್ವೀಕರಿಸಿದ್ದಾರೆ.
Poll (Public Option)

Post a comment
Log in to write reviews