6 ಸಿಕ್ಸರ್, 86 ಬೌಂಡರಿ, 498 ರನ್ - ಸಚಿನ್, ಪೃಥ್ವಿ ಶಾ ಸಾಲಿಗೆ 18ರ ವಿದ್ಯಾರ್ಥಿ!
ಗುಜರಾತ್: ದ್ರೋಣ ದೇಸಾಯಿ ಎಂಬ ಗುಜರಾತ್ ಶಾಲಾ ವಿದ್ಯಾರ್ಥಿಯೊಬ್ಬ ಶಾಲಾ ಪಂದ್ಯದಲ್ಲಿ 6 ಸಿಕ್ಸರ್, 86 ಬೌಂಡರಿ ಬಾರಿಸಿ 498 ರನ್ ಗಳಿಸಿದ್ದಲ್ಲದೆ ಇದೀಗ ಸಚಿನ್ ತೆಂಡುಲ್ಕರ್ ಮತ್ತು ಪೃಥ್ವಿ ಶಾ ಸಾಲಿಗೆ ಸೇರಿದ್ದು ಎಲ್ಲರಲ್ಲೂ ಅಚ್ಚರಿಗೊಳಿಸಿದೆ.
ಹಾಗಾದ್ರೆ ಈ ದ್ರೋಣ ದೇಸಾಯಿ ಯಾರು?
ಗುಜರಾತ್‌ನ ಶಾಲಾ ವಿದ್ಯಾರ್ಥಿ ದ್ರೋಣ ದೇಸಾಯಿ, 7 ನೇ ವರ್ಷದಿಂದ ಕ್ರಿಕೆಟ್ ಆಡುತ್ತಿದ್ದಾರೆ. ಜೂನಿಯರ್ ಮಟ್ಟದಿಂದಲೇ ಕ್ರಿಕೆಟ್ ಆರಂಭಿಸಿದ ದ್ರೋಣ, ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಶ್ರೇಯಾಂಕದಲ್ಲಿ ಮೇಲೇರಿದ್ದಾರೆ. ಈಗಾಗಲೇ ಗುಜರಾತ್ 14 ವರ್ಷದೊಳಗಿನವರ ತಂಡದಲ್ಲಿ ಆಡಿರುವ ದ್ರೋಣ, ಈಗ 19 ವರ್ಷದೊಳಗಿನವರ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಶಾಲಾ ಕ್ರಿಕೆಟ್ ಪಂದ್ಯದಲ್ಲಿ ಮ್ಯಾಜಿಕ್ ಮಾಡಿದ ದ್ರೋಣ ದೇಸಾಯಿ 320 ಎಸೆಗಳಲ್ಲಿ 6 ಸಿಕ್ಸರ್‌ಗಳು, 86 ಬೌಂಡರಿಗಳು ಸೇರಿದಂತೆ 498 ರನ್ ಗಳಿಸಿದರು. ಗಾಂಧಿನಗರದ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 19 ವರ್ಷದೊಳಗಿನವರ ದಿವಾನ್ ಬಲ್ಲುಭಾಯಿ ಟ್ರೋಫಿ ಟೂರ್ನಿಯಲ್ಲಿ ಸೇಂಟ್ ಸೇವಿಯರ್ಸ್ (ಲಯೋಲಾ) ತಂಡದ ಪರ ಆಡುವಾಗ ಈ ಸಾಧನೆ ಮಾಡಿದ್ದಾರೆ.
ಜೆ.ಎಲ್. ಇಂಗ್ಲಿಷ್ ಶಾಲೆಯ ವಿರುದ್ಧ ಅವರು ಈ ಸಾಧನೆ ಮಾಡಿದರು, ಇನ್ನಿಂಗ್ಸ್ ಮತ್ತು 712 ರನ್‌ಗಳ ಅಂತರದಿಂದ ತಮ್ಮ ತಂಡದ ಅದ್ಭುತ ಗೆಲುವನ್ನು ಖಚಿತಪಡಿಸಿಕೊಂಡರು. ಅವರನ್ನು 19 ವರ್ಷದೊಳಗಿನವರ ಗುಜರಾತ್ ರಾಜ್ಯ ತಂಡಕ್ಕೆ ಸೇರಿಸಿಕೊಳ್ಳಲು ಆಯ್ಕೆದಾರರು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅದರ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದ್ರೋಣ ಅವರನ್ನು ನೋಡಬಹುದು ಎನ್ನಲಾಗುತ್ತಿದೆ.
1966 ರಿಂದ 1976 ರವರೆಗೆ 10 ವರ್ಷಗಳ ಕಾಲ ರಣಜಿ ಟ್ರೋಫಿಯಲ್ಲಿ ಆಡಿದ್ದ ಜೈ ಪ್ರಕಾಶ್ ಆರ್. ಪಟೇಲ್ ಅವರಿಂದ ದೇಸಾಯಿ ತರಬೇತಿ ಪಡೆದಿದ್ದಾರೆ ಎಂಬುದು ಗಮನಾರ್ಹ ವಿಷಯ. “ನಾನು ಕ್ರಿಕೆಟಿಗನಾಗುವ ಸಾಧ್ಯತೆ ಇದೆ ಎಂದು ನನ್ನ ತಂದೆ ನಂಬಿದ್ದರು. ಅವರು ನನ್ನನ್ನು ಜೆಪಿ ಸರ್ (ಜೈಪ್ರಕಾಶ್ ಪಟೇಲ್) ಬಳಿ ಕರೆದುಕೊಂಡು ಹೋದರು, ಅಂದಿನಿಂದ, ಕ್ರಿಕೆಟ್ ನನ್ನ ಜೀವನವಾಯಿತು. 8 ನೇ ತರಗತಿಯಿಂದ 12 ನೇ ತರಗತಿಯವರೆಗೆ, ನಾನು ಪರೀಕ್ಷೆ ಬರೆಯಲು ಮಾತ್ರ ಶಾಲೆಗೆ ಹೋಗುತ್ತಿದ್ದೆ. ಸಂಪೂರ್ಣವಾಗಿ ಕ್ರಿಕೆಟ್‌ನತ್ತ ಗಮನ ಹರಿಸಿದೆ,” ಎಂದು ದ್ರೋಣ ದೇಸಾಯಿ ಹೇಳಿದ್ದಾರೆ.
Post a comment
Log in to write reviews