2024-12-24 07:21:47

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮೆಕ್ಕಾದಲ್ಲಿ 50C ತಾಪಮಾನ ಹೆಚ್ಚಳ: 550 ಹಜ್ ಯಾತ್ರಿಕರು ಸಾವು!

ಸೌದಿ: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮೆಕ್ಕಾ ತೆರಳಬೇಕು ಎನ್ನುವುದು ಪ್ರತಿಯೊಬ್ಬ ಮುಸ್ಲಿಮರ ನಂಬಿಕೆಯಾಗಿದೆ. ವಿಶ್ವದ ಅತಿ ದೊಡ್ಡ ಧಾರ್ಮಿಕ ಯಾತ್ರೆ ಎನಿಸಿಕೊಂಡಿರುವ ಸೌದಿ ಅರೇಬಿಯಾದ ಹಜ್‌ ಯಾತ್ರೆಗೆ ಹೋದವರು ಬಿರು ಬಿಸಿಲಿನಿಂದ ತೊಂದರೆ ಅನುಭವಿಸುವಂತಾಗಿದೆ. ಪ್ರತಿ ಸಲದಂತೆ ಈ ಸಲ ಬಕ್ರೀದ್ ಹಬ್ಬದ ಪ್ರಯುಕ್ತ ಲಕ್ಷಾಂತರ ಜನ ಹಜ್ ಯಾತ್ರೆಗಾಗಿ ಮೆಕ್ಕಾಗೆ ತೆರಳಿದ್ದರು. ಈ ವೇಳೆ ಉಷ್ಣ ಗಾಳಿಯಿಂದ ಯಾತ್ರಾರ್ಥಿಗಳು ಸಾವನ್ನಪ್ಪಿರುವುದು ವರದಿಯಾಗಿದೆ.

ಈಗಾಗಲೇ ಬೇರೆ ಬೇರೆ ದೇಶದ 550ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಸುಡು ಬಿಸಿಲಿನಲ್ಲಿ ಯಾತ್ರಾರ್ಥಿಗಳ ಮೃತದೇಹಗಳು ಎಲ್ಲೆಂದರಲ್ಲಿ ಕಾಣಸಿಗುತ್ತಿದೆ.ಈ ಬಾರಿ ಭಾರತದಿಂದ 1 ಲಕ್ಷ 75 ಸಾವಿರ ಯಾತ್ರಿಕರು ಪವಿತ್ರ ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾ ತಲುಪಿದ್ದಾರೆ. ಇನ್ನು ಉಷ್ಣ ಗಾಳಿಯಿಂದ ಮೃತರಾದವರಲ್ಲಿ  323 ಮಂದಿ ಈಜಿಪ್ಟಿನವರಾಗಿದ್ದು, ಶಾಖ-ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಬಗ್ಗೆ ವರದಿಯಾಗಿದೆ. ಬಿಸಿ ಗಾಳಿಯಿಂದ ತಪ್ಪಿಸಿಕೊಳ್ಳಲು ಛತ್ರಿಗಳನ್ನು ಬಳಸಲು ಸೌದಿ ಅಧಿಕಾರಿಗಳು ಯಾತ್ರಿಕರಿಗೆ ಸಲಹೆ ನೀಡಿದ್ದಾರೆ.

Post a comment

No Reviews