
ಗಜೇಂದ್ರಗಡ: ಸಿಲಿಂಡರ್ ಸ್ಫೋಟಗೊಂಡು ಸುಮಾರು 50 ಸಾವಿರ ರೂಪಾಯಿ ವಸ್ತುಗಳ ಸುಟ್ಟು ಕರಕಲಾಗಿರುವ ಘಟನೆ ಇಟಗಿ ಗ್ರಾಮದಲ್ಲಿ ನಡೆದಿದೆ. ರಾಜು ಎಗ್ ರೈಸ್ ಹೋಟೆಲ್‌ನಲ್ಲಿ ತಡರಾತ್ರಿ ಅನಿಲ ಸೋರಿಕೆಯಿಂದಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಅವಘಡದಿಂದಾಗಿ ಸುಮಾರು 50 ಸಾವಿರದಷ್ಟು ವಸ್ತುಗಳು ನಷ್ಟವಾಗಿವೆ ಎಂದು ತಿಳಿದುಬಂದಿದೆ.
Poll (Public Option)

Post a comment
Log in to write reviews