
ಹರಿಯಾಣ: ಸಾಮಾನ್ಯವಾಗಿ ಒಂದು ಮದ್ಯಮ ವರ್ಗದ ಮನೆಯಲ್ಲಿ 2000 ರಿಂದ 2500 ಕರೆಂಟ್ ಬಿಲ್ ಬರುವುದು ಸಹಜ. ಆದರೆ ಇಲ್ಲೊಂದು ಕುಟುಂಬಕ್ಕೆ 2 ತಿಂಗಳಿಗೆ 45 ಸಾವಿರ ವಿದ್ಯುತ್ ಬಿಲ್ ಬಂದಿದ್ದು, ಈ ವಿದ್ಯುತ್ ಬಿಲ್ ನೋಡಿದ ಯಜಮಾನನಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ.
ಈ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಜಾಯಿನ್ ಹುಡ್ ಆಪ್ಲಿಕೇಶನ್‌ನ ಸಿಇಒ ಜಸ್ವೀರ್ ಸಿಂಗ್ ಅವರ ಮನೆಯ ಕೇವಲ ಎರಡು ತಿಂಗಳ ಕರೆಂಟ್ ಬಿಲ್ ಬರೋಬ್ಬರಿ 45,491 ಆಗಿದ್ದು, ಈ ಭಾರೀ ಮೊತ್ತದ ವಿದ್ಯುತ್ ಬಿಲ್ ಕಂಡು ಅವರು ಶಾಕ್ ಆಗಿದ್ದಾರೆ. ಅವರು ಆನ್‌ಲೈನ್ ಬಿಲ್ ಪೇ ಮಾಡಿದ ಸ್ಕ್ರೀನ್ ಶಾಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಇದನ್ನೆಲ್ಲಾ ನೋಡಿ ಇನ್ನು ಮುಂದೆ ವಿದ್ಯುತ್ ಬದಲಿಗೆ ಕ್ಯಾಂಡಲ್ ಬಳಸುವ ಯೋಜನೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.
Poll (Public Option)

Post a comment
Log in to write reviews