
ಚಂಡೀಗಢ: ಎರಡು ಗುಂಪುಗಳ ನಡುವೆ ಪರಸ್ವರ ಗುಂಡಿನ ದಾಳಿ ನಡೆದಿದ್ದು, ನಾಲ್ವರು ಸಾವಿಗೀಡಾಗಿರುವ ಘಟನೆ ಪಂಜಾಬ್‌ನ ಗುರುದಾಸಪುರ ಜಿಲ್ಲೆಯಲ್ಲಿ ನಡೆದಿದೆ.
ಜುಲೈ.7ರಂದು ರಾತ್ರಿ ಗುರುದಾಸಪುರ ಜಿಲ್ಲೆ ಬಟಾಲಾದ ವಿತ್ವಾನ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎರಡು ಗುಂಪುಗಳಲ್ಲಿ ಒಟ್ಟು 13 ಜನರಿದ್ದರು ಎನ್ನಲಾಗಿದೆ. ಈ ಗಲಭೆಗೆ ಹಳೆ ವೈಷಮ್ಯವೇ ಕಾರಣವಿರಬಹುದು ಎನ್ನಲಾಗಿದೆ. ಗುಂಡಿನ ದಾಳಿಯಲ್ಲಿ 4 ಜನ ಮೃತಪಟ್ಟಿದ್ದು 8 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Poll (Public Option)

Post a comment
Log in to write reviews