
ಕೊಪ್ಪಳ: ಕೊಪ್ಪಳದ (ಕಿಮ್ಸ್) ಅಧೀನದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, 45 ವರ್ಷದ ಮಹಿಳೆಯೊಬ್ಬರ ಗರ್ಭಾಶಯದಲ್ಲಿದ್ದ ನಾಲ್ಕೂವರೆ ಕೆ.ಜಿ. ತೂಕದ ಗಡ್ಡೆಯನ್ನು ಹೊರ ತೆಗೆದಿದ್ದಾರೆ.
ತಾಲ್ಲೂಕಿನ ಬಿಸರಳ್ಳಿ ಗ್ರಾಮದ ಮಹಿಳೆಯೊಬ್ಬರು ಹೊಟ್ಟೆನೋವಿನಿಂದ ಬಳಲುತ್ತಿದ್ದಳು ಅವಳನ್ನು ಪರೀಕ್ಷೆಗೆ ಒಳಪಡಿಸಿದಾಗ ಗರ್ಭಾಶಯದಲ್ಲಿ ದೊಡ್ಡ ಗಡ್ಡೆ ಇರುವುದು ತಿಳಿದು ಬಂದಿದೆ. ನಾರಾಯಣಿ ಮತ್ತು ಅವರ ತಂಡದ ಸದಸ್ಯರಾದ ಡಾ.ಧನಲಕ್ಷ್ಮೀ ಕೆ.ಆರ್, ಡಾ.ಸೀಮಾ ಬಿ.ಎನ್ ಹಾಗೂ ಡಾ.ರಾಜೇಶ ಬಿ.ಎನ್. ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಗಡ್ಡೆ ಹೊರತೆಗೆದಿದ್ದಾರೆ.
Poll (Public Option)

Post a comment
Log in to write reviews