ಟಾಪ್ 10 ನ್ಯೂಸ್
ವಾಯುವ್ಯ ಸಾರಿಗೆ ಸಂಸ್ಥೆಗೆ ಸೇರ್ಪಡೆಯಾಗಲಿವೆ 350 ಹೊಸ ವಿದ್ಯುತ್ ಚಾಲಿತ ಬಸ್ ಗಳು

ಹುಬ್ಬಳ್ಳಿ: 350 ಹೊಸ ವಿದ್ಯುತ್ ಚಾಲಿತ ಬಸ್‌ಗಳನ್ನು ರಸ್ತೆಗಿಳಿಸಲು ವಾಯವ್ಯ ಸಾರಿಗೆ ಸಂಸ್ಥೆ ನಿರ್ಧರಿಸಿದ್ದು, ಎರಡು ತಿಂಗಳಲ್ಲಿ ವಿದ್ಯುತ್ ಚಾಲಿತ ಸಂಚಾರ ಆರಂಭಿಸಲಿವೆ.
ಜನದಟ್ಟಣೆ ಹಾಗೂ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸಂಸ್ಥೆಯ ಹೊಸ ಬಸ್ ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ.
ಸಂಸ್ಥೆಯ 350 ವಿದ್ಯುತ್ ಚಾಲಿತ ಬಸ್‌ಗಳನ್ನು 150 ನಗರ ಮತ್ತು 200 ಗ್ರಾಮೀಣ ಸಾರಿಗೆಗೆ ಈ ವಿದ್ಯುತ್ ಚಾಲಿತ ಬಸ್‌ಗಳ ಓಡಾಟಕ್ಕೆ ಚಿಂತನೆ ನಡೆಸಿದೆ.
ಬಸ್‌ಗಳ ಖರೀದಿ ಸಂಬಂಧ ಈಗಾಗಲೇ ಟೆಂಡರ್ ಅವಧಿ ಮೇ 31ಕ್ಕೆ ಮುಕ್ತಾಯಗೊಂಡಿದ್ದು, ಬಹುತೇಕ ಕಂಪನಿಗಳು ಸ್ಪಂದಿಸಿದ್ದು ಕೆಲವೇ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮಾತ್ರವಲ್ಲದೇ, ವಾಯುವ್ಯ ಕರ್ನಾಟಕ ಭಾಗದಲ್ಲೂ ವಿದ್ಯುತ್ ಚಾಲಿತ ಬಸ್‌ಗಳು ಓಡಾಟ ನಡೆಸಲಿವೆ. ಬಸ್‌ಗಳ ಮೈಲೇಜ್ ಆಧಾರದ ಮೇಲೆ ಟೆಂಡರ್ ಕರೆಯಲಾಗಿದೆ ಎಂದು ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಿಯಾಂಕ ಹೇಳಿದ್ದಾರೆ.
Poll (Public Option)

Post a comment
Log in to write reviews