
ಹಾವೇರಿ: ವಿಪರೀತ ಮಳೆಗೆ ಮನೆಗೋಡೆ ಕುಸಿದು ಬಿದ್ದು ಎರಡು ಕಂದಮ್ಮಗಳು ಹಾಗೂ ಒಬ್ಬ ಮಹಿಳೆ ಸಾವನ್ನಪ್ಪಿರುವ ದುರಂತ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಸಂಭವಿಸಿದೆ.
ಅಮೂಲ್ಯ ಹಾಗೂ ಅನನ್ಯ ಮೃತಪಟ್ಟ ಎರಡು 2 ವರ್ಷದ ಅವಳಿಜವಳಿ ಮಕ್ಕಳು. ಜೊತೆಗೆ ಇವರ ತಾಯಿ ಚೆನ್ನಮ್ಮ (30) ಕೂಡ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮನೆಯೊಳಗಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮನೆ ಬೀಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಕೂಡಲೇ ರಕ್ಷಣೆಗೆ ಧಾವಿಸಿದ್ದು, ಮೃತ ದೇಹಗಳನ್ನ ಹೊರ ತೆಗೆದು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಸವಣೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
Poll (Public Option)

Post a comment
Log in to write reviews