
ದುಬೈ: ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್ ನಡೆಸಿದ್ದ ವಾಯುದಾಳಿಯಲ್ಲಿ ಕನಿಷ್ಠ 274 ಮಂದಿ ಮೃತಪಟ್ಟಿದ್ದಾರೆ.
ಹಮಾಸ್ ಬಳಿ ಇರುವ ಒತ್ತೆಯಾಳುಗಳ ರಕ್ಷಣೆ ಗಾಗಿ ಸಮರ ಮುಂದುವರಿಸಿರುವ ಇಸ್ರೇಲ್ ಸೇನಾಪಡೆ, ಗಾಜಾದ ಕೇಂದ್ರ ಭಾಗದಲ್ಲಿರುವ ಅಲ್ ನುಸೇರಿಯಾತ್ ನಿರಾಶ್ರಿತ ಶಿಬಿರದ ಮೇಲೆ ದಾಳಿಯಲ್ಲಿ ಈ ಘಟನೆ ನಡೆದಿದೆ. ದಾಳಿಯಲ್ಲಿ ಕನಿಷ್ಠ 274 ಮಂದಿ ಮೃತಪಟ್ಟಿದ್ದು, 698 ಮಂದಿ ಗಾಯಗೊಂಡಿದ್ದಾರೆ. 2023ರ ಅಕ್ಟೋಬರ್ 7ರಿಂದ ಇದುವರೆಗೆ ಇಸ್ರೇಲ್ ನಡೆಸಿರುವ ದಾಳಿಯಲ್ಲಿ 37084 ಪ್ಯಾಲೆ ಸ್ಟೀನಿಯರು ಮೃತಪಟ್ಟು, 84494 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಇಲಾಖೆ ತಿಳಿಸಿದೆ.
Poll (Public Option)

Post a comment
Log in to write reviews