
ಬೆಂಗಳುರು: ಬೆಂಗಳೂರಿನಲ್ಲಿ ಕಳೆದ 2 ದಿನದ ಹಿಂದೆ ಸುರಿದ ಭಾರೀ ಮಳೆ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿತ್ತು. ಕಳೆದ 2 ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ನಗರದ ಮಹಾಲಕ್ಷ್ಮಿ ಲೇಔಟ್ ಒಂದರಲ್ಲೇ ಸುಮಾರು 22 ಮರಗಳು ಹಾಗೂ 5 ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಘಟನೆ ನಡೆದ 2 ದಿನದ ಬಳಿಕ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ವಿದ್ಯುತ್ ಕಂಬಗಳ ದುರಸ್ತಿಗೆ ಹಾಗೂ ಮರಗಳ ತೆರವಿಗೆ ಮುಂದಾಗಿದ್ದಾರೆ.
ಕೇವಲ ಮಹಲಕ್ಷ್ಮಿ ಲೇಔಟ್ ಮಾತ್ರವಲ್ಲ ನಗರದ ಇತರೆಡೆ ಕೂಡ ಮಳೆ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿತ್ತು. ಇದರ ಪರಿಣಾಮ ನಗರದಾದ್ಯಂತ ಸುಮಾರು 270 ಮರಗಳು ಹಾಗೂ ಅನೇಕ ವಿದ್ಯತ್ ಕಂಬಗಳು ಧರೆಗುರುಳಿವೆ.
Poll (Public Option)

Post a comment
Log in to write reviews