2024-12-24 07:39:11

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

​​​​​​​ಪ್ರತಿ ಗಂಟೆಗೂ 26 ಮಂದಿ ನೀರಿನಲ್ಲಿ ಮುಳುಗಿ ಸಾಯುತ್ತಾರೆ! ಅಚ್ಚರಿಯಾದರೂ ನಿಜ!

ನವದೆಹಲಿ: ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಪ್ರಕರಣಗಳು ಸಾಮಾನ್ಯವಾಗಿ ಕಂಡರೂ ಜಗತ್ತಿನೆಲ್ಲೆಡೆ ಪ್ರತಿ ಒಂದು ಗಂಟೆಗೆ 26 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದಾರೆ ಎಂಬುದು ಆತಂಕಕಾರಿಯಾಗಿದೆ. ಈ ರೀತಿ ನೀರಿನ ಅವಘಡದಿಂದ ಜಾಗತಿಕವಾಗಿ ದಿನವೊಂದಕ್ಕೆ 350 ಹಾಗೂ ಪ್ರತಿ ವರ್ಷ 2,36,000 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ನೈರುತ್ಯ ಏಷ್ಯಾದ ಪ್ರಾದೇಶಿಕ ನಿರ್ದೇಶಕರು ನೀಡಿದ್ದಾರೆ.

ಜುಲೈ 25ರ ವಿಶ್ವ ಮುಳುಗುವಿಕೆ ತಡೆಗಟ್ಟುವ ದಿನದ ಹಿನ್ನೆಲೆ ಈ ಕುರಿತು ಮಾತನಾಡಿರುವ ಅವರು, ನೀರಿನಿಂದ ಮುಳುಗಿ ಸಾವು ಮತ್ತು ಇತರೆ ಗಾಯಗಳಿಗೆ ಗುರಿಯಾಗುವ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎಂದು ಒತ್ತಾಯಿಸಿದ್ದಾರೆ.

2019ರಲ್ಲಿ ಈ ರೀತಿ ಮುಳುಗಿ ನೈರುತ್ಯ ಏಷ್ಯಾದಲ್ಲಿ 70,034 ಮಂದಿ ಸಾವನ್ನಪ್ಪಿದ್ದಾರೆ. ಜಗತ್ತಿನೆಲ್ಲೆಡೆ ಈ ರೀತಿ ನೀರಿನ ಅವಘಡದಿಂದ ಸಾವಿನಲ್ಲಿ ಎರಡನೇ ಸ್ಥಾನವನ್ನು ಇದು ಹೊಂದಿದೆ ಎಂದಿದ್ದಾರೆ.

ಮುಳುಗುವಿಕೆ ದಿಢೀರ್​ ಮತ್ತು ನಿಶಬ್ಧ ಸಾವಾಗಿದೆ. ಅರಿವಿಲ್ಲದೇ ಸಂತ್ರಸ್ತರು ಕೆಲವೇ ನಿಮಿಷದಲ್ಲಿ ಈ ರೀತಿಯ ಅವಘಡಗಳಿಗೆ ಬಲಿಯಾಗುತ್ತಾರೆ. ಆದರೆ, ಈ ರೀತಿಯ ಅಪಘಾತಗಳನ್ನು ತಡೆಯಬಹುದಾಗಿದೆ ಎಂದಿದ್ದಾರೆ.

ಈ ರೀತಿ ನೀರಿನಿಂದ ಮುಳುಗಿ ಸಾವನ್ನಪ್ಪುವ ಘಟನೆಗಳಲ್ಲಿ ಬಹುತೇಕ ಸಂತಸ್ತರು ಮನೆಯ ಸಮೀಪದ ಅನಾಹುತಗಳಿಂದಲೇ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ, ಇದರ ಮೇಲ್ವಿಚಾರಣೆ ಕೊರತೆ, ಅಪಾಯಕಾರಿ ನೀರಿನ ಮೂಲಗಳು, ಅರಿವಿನ ಅಜಾಗ್ರತೆ ಮತ್ತು ಬಡತನ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಇಂತಹ ಅನಾಹುತಗಳನ್ನು ತಡೆಗಟ್ಟಬಹುದಾಗಿದ್ದು, ಇಂತಹ ಘಟನೆಗಳ ಕುರಿತು ತಿಳಿಸುವುದು ಕೂಡ ನಿರ್ಣಾಯಕವಾಗಿದೆ. ಮುಳುಗುವಿಕೆಯನ್ನು ತಡೆಗಟ್ಟಲು ಜಾಗತಿಕ ಆರೋಗ್ಯ ಸಂಸ್ಥೆಯು ಸಾಕ್ಷ್ಯ ಆಧಾರಿತ, ವೆಚ್ಚ ಪರಿಣಾಮಕಾರಿ ಮತ್ತು ತಂತ್ರಗಳನ್ನು ವಿವರಿಸಲಾಗಿದೆ. ಈ ರೀತಿಯ ತಂತ್ರಗಳು ವಿಭಿನ್ನ ಸನ್ನಿವೇಶಗಳಿಗೆ ಅನುಗುಣವಾಗಿ ಮಾರ್ಗದರ್ಶನದೊಂದಿಗೆ ಬರುತ್ತವೆ.

ಈ ಮುಳುಗಡೆ ಅಪಾಯವನ್ನು ತಡೆಯುವುದು ಎಲ್ಲರ ಪಾತ್ರವಿದೆ. ಜಾಗೃತಿ ಮೂಡಿಸುವ ಮೂಲಕ, ಪರಿಣಾಮಕಾರಿ ಪರಿಹಾರ ಉತ್ತೇಜಿಸುವ ಮೂಲಕ, ಸ್ಥಳೀಯ ಅಥವಾ ರಾಷ್ಟ್ರೀಯ ಸರ್ಕಾರಗಳೊಂದಿಗೆ ತಡೆಗಟ್ಟುವ ಯೋಜನೆಗಳು ಮತ್ತು ನೀತಿಗಳ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಬೇಕಿದೆ. ತೆರೆದ ನೀರಿನ ಸುತ್ತಮುತ್ತ ಸಂಸ್ಥೆಗಳೊಂದಿಗೆ, ಸ್ವಯಂಸೇವಕರಾಗಿ ಅಥವಾ ವೈಯಕ್ತಿಕ ಮತ್ತು ಕುಟುಂಬದ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವುದರಿಂದ, ಬದಲಾವಣೆಗೆ ಮುಂದಾಗಬೇಕಿದೆ. (ಐಎಎನ್​ಎಸ್​)

Post a comment

No Reviews