2024-09-19 04:40:44

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸೋಲಿನ ಕಾರಣ ಕಾಂಗ್ರೆಸ್‌ನ 21 ಸಚಿವರು ರಾಜೀನಾಮೆ..!? 

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್ ಪಕ್ಷದ ಕೆಲ ಸ್ವಯಂಘೋಷಿತ ಬುದ್ಧಿ ಜೀವಿಗಳ ಲೆಕ್ಕಾಚಾರ ತಲೆಕೆಳಗಾಗಿದೆ. ಸಿಎಂ ಮತ್ತು ಡಿಸಿಎಂಗೆ ಮುಖಭಂಗವಾಗಿದೆ. ಸಿಎಂ ತಮ್ಮ ಸ್ವಕ್ಷೇತ್ರ ಮೈಸೂರಿನಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಸಾಧ್ಯವಾಗಿಲ್ಲ. ಇನ್ನು ಡಿಸಿಎಂ ಬೆಂಗಳೂರು ಗ್ರಾಮಾಂತರದಲ್ಲಿ ಸಹೋದರನನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಶಿವಮೊಗ್ಗದಲ್ಲಿ ಮಾನ್ಯ ಶಿಕ್ಷಣ ಸಚಿವರು ತಮ್ಮ ಅಕ್ಕನನ್ನ, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ರಾಮಲಿಂಗಾರೆಡ್ಡಿ ಮತ್ತು ಶಿವಾನಂದ ಪಾಟೀಲ್ ತಮ್ಮ ಮಕ್ಕಳನ್ನ ಗೆಲ್ಲಿಸಿಕೊಳ್ಳುವಲ್ಲಿ ಸೋತಿದ್ದಾರೆ. ಈಗ ಕಾಂಗ್ರೆಸ್ ವಲಯದಲ್ಲಿ ಈ ಸೋಲಿನ ಹೊಣೆಯನ್ನ ಈ ಸಚಿವರು ನೇರವಾಗಿ ಹೊತ್ತುಕೊಳ್ಳುವರೇ? ಅಲ್ಲದೆ ಎಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋತಿರುವ ಕಡೆ ಅಲ್ಲಿನ ಉಸ್ತುವಾರಿ ಸಚಿವರು ಸೋಲಿನ ಹೊಣೆ ತಮ್ಮ ಮೇಲೆ ಹೊತ್ತುಕೊಳ್ಳುವರೇ? ಎಂದು ಚರ್ಚೆ ಜೋರಾಗಿಯೆ ಎದ್ದಿದೆ. 
ರಾಜೀನಾಮೆ ನೀಡುವರೇ ಸಚಿವರು ?
ಸಚಿವರು ರಾಜೀನಾಮೆ ನೀಡುವರೇ ಎಂಬ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದೆ. ಕಾರಣವೇನೆಂದರೆ ಪಕ್ಷದ ಅಭ್ಯರ್ಥಿಗಳು ಸೋತರೆ ಅದರ ಹೊಣೆ ಆಯಾ ಕ್ಷೇತ್ರದ ಉಸ್ತುವಾರಿ ಸಚಿವರು ಹೊರಬೇಕು ಮತ್ತು ರಾಜೀನಾಮೆ ನೀಡಬೇಕೆಂದು ಪಕ್ಷದ ಪ್ರಭಾವಿಯೊಬ್ಬರು ತಾಕೀತು ಮಾಡಿದ್ದರು ಎಂದು ಪಕ್ಷದ ಕಾರ್ಯಕರ್ತರು ಮಾತನಾಡಿ ಕೊಳ್ಳುತಿದ್ದಾರೆ. ಅದರಂತೆ ಈ ಮಾತುಗಳು ನಿಜವಾದರೆ ಸಚಿವರುಗಳ ಪೈಕಿ 21 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ.
21 ಕ್ಷೇತ್ರದಲ್ಲಿ ಸಚಿವರು ವಿಫಲ  
ತೀವ್ರ ಕುತೂಹಲ ಹಾಗೂ ಜಿದ್ದಾ ಜಿದ್ದಿನ ಕಣವಾಗಿದ್ದ ಮಂಡ್ಯದ ಉಸ್ತುವಾರಿಯನ್ನ ಸಚಿವರಾದ ಚಲುವರಾಯ ಸ್ವಾಮಿ ತೆಗೆದುಕೊಂಡಿದ್ದರು. ಮಾಜಿ ಸಿಎಂ ಕುಮಾರ ಸ್ವಾಮಿಯ ಎದುರು ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರುರವರನ್ನು ಗೆಲ್ಲಿಸುವುದರಲ್ಲಿ ವಿಫಲವಾಗಿದ್ದಲ್ಲದೆ ಹೀನಾಯ ಸೋಲಿಗೂ ಕಾರಣರಾಗಿದ್ದಾರೆ. 
ಇನ್ನುಳಿದಂತೆ ಉಸ್ತುವಾರಿ ಸಚಿವರು ತಮ್ಮ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸುವಲ್ಲಿ ವಿಫಲರಾದ ಕ್ಷೇತ್ರಗಳೆಂದರೆ ಧಾರವಾಡ, ಹಾವೇರಿ, ಕೋಲಾರ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ -ಚಿಕ್ಕಮಗಳೂರು, ಉತ್ತರಕನ್ನಡ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಕ್ಷಿಣ ಕನ್ನಡ. ಇಷ್ಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಯಾವ ಗ್ಯಾರಂಟಿಗಳೂ ಪ್ರಭಾವ ಬೀರಿದ ಹಾಗಿಲ್ಲ, ಅಲ್ಲದೆ ಬೆಂಗಳೂರು ಸ್ಪರ್ಧಿಸಿದ ಕ್ಷೇತ್ರಗಳಲ್ಲಿ ಬೆಂಗಳೂರು ಕೇಂದ್ರ ಹೊರತುಪಡಿಸಿದರೆ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದೆ. ಸೋತಿರುವ ಕಡೆ ಅಲ್ಲಿನ ಉಸ್ತುವಾರಿ ಸಚಿವರು ಸೋಲಿನ ಹೊಣೆ ಹೊತ್ತುಕೊಳ್ಳುವರೇ? ಎನ್ನುವ ಪ್ರಶ್ನೆ ಈಗ ಎದ್ದಿದೆ.
9 ಕ್ಷೇತ್ರದಲ್ಲಿ ಸಚಿವರು ಪಾಸ್
21 ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸುವಲ್ಲಿ ಸಚಿವರು ವಿಫಲರಾದರೆ ಇನ್ನುಳಿದ 9 ಕ್ಷೇತ್ರದಲ್ಲಿ ತಮ್ಮ ಜವಾಬ್ದಾರಿ  ನಿಭಾಯಿಸುವದರಲ್ಲಿ ಯಶಸ್ವಿಯಾಗಿದ್ದಾರೆ. ಸಚಿವರಾದ ಸತೀಶ್ ಜಾರಕಿಹೋಳಿ ಚಿಕ್ಕೋಡಿಯಲ್ಲಿ, ಈಶ್ವರ್ ಖಂಡ್ರೆ ಬೀದರ್ ನಲ್ಲಿ ಮತ್ತು ಚಾಮರಾಜನಗರದಲ್ಲಿ ಹೆಚ್.ಸಿ.ಮಹದೇವಪ್ಪರವರು ತಮ್ಮ ಮಕ್ಕಳನ್ನು ಹಾಗೆ ದಾವಣೆಗೆರೆಯಲ್ಲಿ ಎಸ್.ಎಸ್ . ಮಲ್ಲಿಕಾರ್ಜುನ್ ತಮ್ಮ ಪತ್ನಿಯನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ. ಇನ್ನುಳಿದಂತೆ ಬಳ್ಳಾರಿ, ಹಾಸನ, ಕೊಪ್ಪಳ, ರಾಯಚೂರು ಮತ್ತು ಕಲಬುರಗಿಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರ ಖರ್ಗೆಯವರ ಅಳಿಯ ರಾಧಾಕ್‌ಋಷ್ಠ ದೊಡ್ಡಮನಿಯನ್ನ ಗೆಲ್ಲಿಸುವುದರಲ್ಲಿ ಸ್ತುವಾರಿ ಸಚಿವರು ತಮ್ಮ ಸಾಮರ್ಥ ಸಾಭೀತು ಮಾಡಿದ್ದಾರೆ.

Post a comment

No Reviews