2024-12-24 07:02:07

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ವರುಣಾರ್ಭಟಕ್ಕೆ  20 ಬಲಿ, ಹವಾಮಾನ ಇಲಾಖೆಯಿಂದ ಕಟ್ಟೆಚ್ಚರಿಕೆ  

ಜೈಪುರ: ರಾಜಸ್ಥಾನದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಳೆದ 24 ಗಂಟೆಗಳಲ್ಲಿ ವಿವಿಧ ದುರ್ಘಟನೆಗಳಲ್ಲಿ 20 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಜೈಪುರ, ಕರೌಲಿ, ಸವಾಯಿ ಮದೊಪುರ್​ ಮತ್ತು ದೌಸಾದಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳು ಜಲಾವೃತ್ತವಾಗಿದೆ. ಇದರಿಂದಾಗಿ ಮಳೆಪೀಡಿತ ಪ್ರದೇಶಗಳಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶಿಸಿದೆ.

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಪೂರ್ವ ರಾಜಸ್ಥಾನದ ಕೆಲವು ಸ್ಥಳಗಳಲ್ಲಿ ಅಧಿಕ ಮಳೆಯಾಗಲಿದ್ದು, ಜೈಪುರ, ಭರತ್‌ಪುರ, ಅಜ್ಮೀರ್ ಮತ್ತು ಕೋಟಾ ವಿಭಾಗಗಳ ಹಲವಾರು ಭಾಗಗಳಲ್ಲಿ ಮುಂದಿನ ಐದರಿಂದ ಆರು ದಿನಗಳವರೆಗೆ ಮಾನ್ಸೂನ್ ಸಕ್ರಿಯವಾಗಿರಲಿದೆ. ಈ ಅವಧಿಯಲ್ಲಿ ರಾಜ್ಯದ ಹಲವೆಡೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆ ಪ್ರಕಾರ, ಜೈಪುರದಲ್ಲಿ ಭಾನುವಾರ ಬೆಳಗ್ಗೆ 8.30ರಿಂದ ಸಂಜೆ 5.30ರ ವರೆಗೆ 63.2 ಮಿ.ಮೀ ಮಳೆಯಾಗಿದೆ. ಕರೌಲಿಯಲ್ಲಿ 31.5 ಮಿ.ಮೀ, ಅಲ್ವಾರ್‌ನಲ್ಲಿ 14.2 ಮಿ.ಮೀ, ಮೌಂಟ್ ಅಬು ಮತ್ತು ಸಿಕರ್‌ನಲ್ಲಿ ತಲಾ 9 ಮಿಲಿ ಮೀಟರ್​, ಫತೇಪುರ್‌ನಲ್ಲಿ 6.5 ಮಿ.ಮೀ ಮಳೆ ದಾಖಲಾಗಿದೆ.

ಜೈಪುರದ ಕನೋಟಾ ಅಣೆಕಟ್ಟು ವೀಕ್ಷಣೆಗೆ ಬಂದಿದ್ದ ಐವರು ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ. ಅಣೆಕಟ್ಟಿನಲ್ಲಿ ಸ್ನಾನಕ್ಕೆ ಇಳಿದ ಆರು ಮಂದಿಯಲ್ಲಿ ಒಬ್ಬ ಪ್ರಾಣ ಉಳಿಸಿಕೊಂಡಿದ್ದು, ಉಳಿದ ಐವರು ಮುಳಗಿ ಸಾವನ್ನಪ್ಪಿದ್ದಾರೆ. ತಡರಾತ್ರಿವರೆಗೆ ಅವರ ದೇಹಕ್ಕೆ ಶೋಧ ನಡೆಸಲಾಯಿತು ಎಂದು ಅಧಿಕಾರಿಗಳು ಮಾಧ್ಯಮದವರಿಗೆ ಮಾಹಿತಿ ತಿಳಿಸಿದ್ದಾರೆ.

ಭರತ್‌ಪುರದ ಬಂಗಂಗಾ ನದಿಯಲ್ಲಿ ಸ್ನಾನಕ್ಕಿಳಿದ ಶ್ರೀನಗರ ಗ್ರಾಮದ ಎಂಟು ಯುವಕರು ಒಬ್ಬರ ನಂತರ ಒಬ್ಬರು ಆಳವಾದ ನೀರಿಗೆ ಜಾರಿಬಿದ್ದು ಕೊನೆಗೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ ಹಿನ್ನಲೆ ಸುರಕ್ಷತಾ ಕ್ರಮಗಳ ಕುರಿತು ಮುಖ್ಯಮಂತ್ರಿ ಭಜನ್​ಲಾಲ್​ ಶರ್ಮಾ ಉನ್ನತ ಮಟ್ಟದ ಸಭೆ ನಡೆಸಿ, ಪರಿಸ್ಥಿತಿ ಅವಲೋಕಿಸಿದರು. ಮಳೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಮತ್ತು ಹವಾಮಾನ ಇಲಾಖೆಯ ಮಳೆ ಮುನ್ಸೂಚನೆಯನ್ನು ಆಧರಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ನೀರಿನ ಒಳಚರಂಡಿ ವ್ಯವಸ್ಥೆ ಮತ್ತು ಕುಡಿಯುವ ನೀರು, ಆಹಾರ ಮತ್ತು ಔಷಧಿಗಳಂತಹ ಮೂಲಭೂತ ಸೌಕರ್ಯಗಳ ಪರಿಶೀಲಿಸಿ. ಹಾನಿಗೊಳಗಾದ ಪ್ರದೇಶಗಳಲ್ಲಿ ನೀರು ಮತ್ತು ವಿದ್ಯುತ್ ಪೂರೈಕೆ ಪುನಃಸ್ಥಾಪಿಸುವಂತೆ ಸೂಚಿಸಿದರು.

Post a comment

No Reviews