
ಹಿಂದೂಗಳ ಪವಿತ್ರ ಯಾತ್ರಾ ಸ್ಥಳದಲ್ಲಿ ಒಡಿಶಾದ ಪುರಿಯ ಜಗನ್ನಾಥ ದೇವಾಲಯ ಒಂದು. ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.
ಇಂತಹ ಪವಿತ್ರ ಯಾತ್ರಾ ಸ್ಥಳದಲ್ಲಿ ಭೀಕರ ಅಪಘಾತ ನಡೆದಿದೆ.ಇತ್ತೀಚಿಗೆ ಪುರಿಯ ಜಗನ್ನಾಥ ಉತ್ಸವದಲ್ಲಿ ಏಕಾಏಕಿ ಪಟಾಕಿ ಸ್ಫೋಟ ಸಂಭವಿಸಿ 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿಗಳ ಆರೋಗ್ಯ ವೆಚ್ಚವನ್ನ ಓಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸಲು ಸೂಚಿಸಲಾಗಿದೆ.
ಮೂಲಗಳ ಪ್ರಕಾರ ನರೇಂದ್ರ ಕೊಳದ ಬಳಿಯ ದೇವಿಘಾಟ್ ಬದಿ ಪಟಾಕಿ ಸಿಡಿಸಲು ಸ್ಥಳ ನಿಗದಿಗೊಳಿಸಲಾಗಿತ್ತು. ದುರದೃಷ್ಟವಶಾತ್ ಆಗಿ ಸಿಡಿದ ಪಟಾಕಿಯ ಕಿಡಿಗಳು ಕೊಳದ ಬಳಿ ಜಲಕ್ರೀಡೆ ವೀಕ್ಷಿಸುತ್ತಿದ್ದ ಭಕ್ತರ ಮೇಲೆ ಎರಗಿವೆ ಎನ್ನಲಾಗಿವೆ.
Poll (Public Option)

Post a comment
Log in to write reviews