
ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್‌ನಲ್ಲಿ ನರೇಂದ್ರ ಮೋದಿ ಸುದೀರ್ಘ ಧ್ಯಾನ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗುತ್ತಿದ್ದು, ಸುಮಾರು 2 ಸಾವಿರ ಪೊಲೀಸರನ್ನ ನಿಯೋಜಿಸಲಾಗಿದೆ. ಮೇ30ಕ್ಕೆ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಮುಕ್ತಾಯಗೊಳ್ಳಲಿದೆ. ಪ್ರಧಾನಿ ಪ್ರಚಾರ ಮುಗಿಸಿ 30ರ ಸಂಜೆಯಿಂದ ಜೂ.1ರ ಮಧ್ಯಾಹ್ನ 3ರ ವರೆಗೆ ಸುಮಾರು 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ.
ಈ ಹಿನ್ನಲೆಯಲ್ಲಿ ತಿರುನಲ್ವೇಲಿ ರೇಂಜ್ ಡಿಐಜಿ ಪ್ರವೇಶ್ ಕುಮಾರ್, ಎಸ್‌ಪಿ ಇ.ಸುಂದರವದನಂ ನೇತೃತ್ವದಲ್ಲಿ ಬುಧವಾರ ಸ್ಥಳಕ್ಕೆ ತೆರಳಿದ್ದ ಪೊಲೀಸರ ತಂಡ, ಕನ್ಯಾಕುಮಾರಿಯಲ್ಲಿನ ಸರ್ಕಾರಿ ಅತಿಥಿಗೃಹ, ಬೋಟ್ ಜೆಟ್ಟಿ, ರಾಕ್ ಮೆಮೋರಿಯಲ್‌ನಲ್ಲಿನ ಸುರಕ್ಷತೆ ಪರಿಶೀಲಿಸಿ, ಹೆಚ್ಚಿನ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ. ಕನ್ಯಾಕುಮಾರಿಯಲ್ಲಿ ಒಟ್ಟು 2 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ವೇಳೆ ಪ್ರಧಾನಿಯ ವಿಶೇಷ ಭದ್ರತಾ ತಂಡವೂ ಸ್ಥಳಕ್ಕೆ ಆಗಮಿಸಲಿದ್ದಾರೆ. ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಟ್ರಯಲ್ ನಡೆಸಿ ಸುರಕ್ಷತೆಯ ಬಗ್ಗೆ ಖಚಿತಪಡಿಸಿಕೊಳ್ಳಲಾಗಿದೆ. ಇನ್ನು ಕೋಸ್ಟಲ್ ಸೆಕ್ಯುರಿಟಿ ಗ್ರೂಪ್, ಇಂಡಿಯನ್ ಕೋಸ್ಟ್ ಗಾರ್ಡ್, ಇಂಡಿಯನ್ ನೇವಿ ಕೂಡ ಕರಾವಳಿ ತೀರದಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಪ್ರಧಾನಿ ಮೋದಿ ಕೇದಾರನಾಥದ ಗುಹೆಯಲ್ಲಿ ಇದೇ ರೀತಿ ಧ್ಯಾನ ನಡೆಸಿದ್ದರು. ಈ ಬಾರಿ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್‌ನಲ್ಲಿ ನರೇಂದ್ರ ಮೋದಿ ಸುದೀರ್ಘ ಧ್ಯಾನದ ನಡೆಸಲಿದ್ದಾರೆ.
Poll (Public Option)

Post a comment
Log in to write reviews