
ಕೊಡಗು: ಪ್ರವಾಸಕ್ಕೆ ಬರುವ ಪ್ರವಾಸಿಗರನ್ನೇ ಗುರಿ ಮಾಡಿಕೊಂಡು 19 ವರ್ಷದ ಯುವತಿ ಸೇರಿದಂತೆ 3 ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ಮಾಡುತ್ತಿದ್ದ ನಕಲಿ ದಂಧೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ (29), ಸಂದೀಪ್ ಕುಮಾರ್, ರಾಕೇಶ್.ಸಿ.ಬಿ (24), ಜಯಲಕ್ಷ್ಮೀ.ಕೆ (29), ಸಹನ.ಎಸ್ (19), ಪಲ್ಲವಿ (30) ಬಂಧಿತ ಆರೋಪಿಗಳು.
ಗುಂಪು ಗುಂಪಾಗಿ ಬರುವ ಯುವಕರು ಹಾಗೂ ಇತರೆ ಪುರುಷ ಪ್ರವಾಸಿಗರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ನಿಮಗೆ ಲಾಡ್ಜ್‌ನಲ್ಲಿ ಹುಡುಗಿಯರನ್ನು ಸಪ್ಲೈ ಮಾಡುವುದಾಗಿ ಹೇಳಿ ಅವರಿಂದ ಮಾತನಾಡಿಸಿ ಹಣ ಹಾಕಿಸಿಕೊಂಡು ಪಂಗನಾಮ ಹಾಕುತ್ತಿದ್ದರು. ಪ್ರತಿನಿತ್ಯ ಹತ್ತಾರು ಗ್ರಾಹಕರಿಗೆ ಸಾವಿರಾರು ರೂ. ಹಣವನ್ನು ವಂಚನೆ ಮಾಡಿ ಸುಲಿಗೆ ಮಾಡುತ್ತಿದ್ದರು.
ಕುಶಾಲನಗರದ ಖಾಸಗಿ ಲಾಡ್ಜ್ ಹೆಸರು ಹೇಳಿ ಹುಡುಗಿಯರನ್ನು ಕಳಿಸುವುದಾಗಿ ಗ್ರಾಹಕರನ್ನು ಅಲ್ಲಿಗೆ ಕರೆಸಿಕೊಳ್ಳುತ್ತಿದ್ದ ತಂಡವು, ಬಳಿಕ ಪದೇ ಪದೇ ದುಡ್ಡು ಹಾಕಿಸಿಕೊಂಡು ಹಲವರಿಗೆ ವಂಚನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಿನ ಆರು ಜನರು ಸೇರಿದಂತೆ ಒಟ್ಟು 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ 2 ಕಾರು 17 ಮೊಬೈಲ್, ಒಂದು ಟ್ಯಾಬ್, ಒಂದು ಲ್ಯಾಪ್‌ಟಾಪ್ ಹಾಗೂ ರೂ. 24,800 ನಗದು ವಶಕ್ಕೆ ಪಡೆದಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮಾರಾಜನ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ.
Poll (Public Option)

Post a comment
Log in to write reviews