
ಚಿತ್ರದುರ್ಗ : KSRTC ಬಸ್ ಡಿಕ್ಕಿ ಹೊಡೆದು 19 ಕುರಿಗಳು ಸಾವನ್ನಪ್ಪಿದರೆ, ಕುರಿಗಾಹಿ ಗಂಭೀರ ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಈರಜ್ಜನಹಟ್ಟಿ ಗೇಟ್ ಬಳಿ ನಡೆದಿದೆ. ಇಂದು ಬೆಳಗಿನ ಜಾವ ಕುರಿಗಳ ಜೊತೆ ಚಳ್ಳಕೆರೆ ತಾಲೂಕಿನ ದಾಸರಮುತ್ತೇನಹಳ್ಳಿ ನಿವಾಸಿ ರಾಜಯ್ಯ ಊರಿನತ್ತ ತೆರಳುತ್ತಿದ್ದರು. ಈ ವೇಳೆ ಧರ್ಮಸ್ಥಳದಿಂದ ಹರಪನಹಳ್ಳಿಗೆ ಬಸ್ ತೆರಳುತ್ತಿದ್ದ KSRTC ಬಸ್ ಡಿಕ್ಕಿ ಹೊಡೆದಿದೆ.
ಇನ್ನು KSRTC ಬಸ್ ಡಿಕ್ಕಿ ಹೊಡೆದ ರಭಸಕ್ಕೆ ತಿಪ್ಪಯ್ಯ ಎಂಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.
Poll (Public Option)

Post a comment
Log in to write reviews