
ದಾವಣಗೆರೆ: ಕಲುಷಿತ ನೀರು ಸೇವಿಸಿ ಇದಕ್ಕಿದ್ದಂತೆ ಜನರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದ್ದು 17 ಜನರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಚನ್ನಗಿರಿ ತಾಲೂಕಿನ ಜೋಳದಾಳ್ ಗ್ರಾಮದಲ್ಲಿ ಕಳೆದ ದಿನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಕಲುಷಿತ ನೀರು ಸೇವನೆಯ ಪರಿಣಾಮ ವಾಂತಿ ಭೇದಿ ಕಾಣಿಸಿಕೊಂಡಿದೆ ಎಂದು ಜೋಳದಾಳ್ ಗ್ರಾಮಸ್ಥರು ಆರೋಪಿಸಿದ್ದಾರೆ. 14 ಜನ ಚನ್ನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ತೀವ್ರವಾಗಿ ಅಸ್ವಸ್ಥರಾಗಿದ್ದ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ
"ಸದ್ಯ ಅಸ್ವಸ್ಥರಾಗಿದ್ದವರ ಆರೋಗ್ಯ ಸ್ಥಿರವಾಗಿದೆ. ಅಸ್ವಸ್ಥಗೊಂಡವರು ಕಲುಷಿತ ನೀರು ಸೇವಿಸಿದ್ದಾರೆ ಎಂದು ಹೇಳುತ್ತಿದ್ದು ಅದು ದೃಢಪಟ್ಟಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನಮ್ಮ ವೈದ್ಯಕೀಯ ತಂಡ ಜೋಳದಾಳ್ ಗ್ರಾಮದಲ್ಲಿ ಬೀಡುಬಿಟ್ಟಿದೆ. ಗ್ರಾಮದಲ್ಲಿ ತುರ್ತಾಗಿ ಆಸ್ಪತ್ರೆಯನ್ನು ತೆರೆಯಲಾಗಿದೆ. ಸೇವಿಸಿರುವ ಆಹಾರದಿಂದ ಅಥವಾ ನೀರಿನಿಂದ ಆರೋಗ್ಯ ಹದಗೆಟ್ಟಿದೆಯಾ ಎಂಬುದು ತನಿಖೆಯಿಂದ ವರದಿ ಬರಬೇಕಷ್ಟೆ. ನೀರಿನ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಹೆಚ್ಒ ಡಾ. ಎಸ್ ಷಣ್ಮುಖಪ್ಪ" ಮಾಹಿತಿ ನೀಡಿದ್ದಾರೆ.
Poll (Public Option)

Post a comment
Log in to write reviews