
ನವದೆಹಲಿ: ಜೂನ್ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನ ರಜೆ ಇವೆ. ಈ 13 ದಿನದಲ್ಲಿ ಬರೋಬ್ಬರಿ ಏಳು ದಿನಗಳು ಶನಿವಾರ ಮತ್ತು ಭಾನುವಾರದ ರಜೆಗಳೇ ಆಗಿವೆ. ಜೂನ್ ತಿಂಗಳಲ್ಲಿ ಎಂಟು ದಿನ ಬ್ಯಾಂಕುಗಳು ಬಂದ್ ಆಗಿರುತ್ತವೆ. ಒಡಿಶಾ ರಾಜ್ಯದಲ್ಲಿ ಜೂನ್ 14ರಿಂದ 17ರವರೆಗೆ ಸತತ ನಾಲ್ಕು ದಿನ ಬ್ಯಾಂಕ್ ರಜೆ ಇರುವುದು ವಿಶೇಷ. ಪಂಜಾಬ್‌ನಲ್ಲಿ ಜೂನ್ 8ರಿಂದ 10ರವರೆಗೆ ಮೂರು ದಿನಗಳು ರಜೆ ಇರುತ್ತವೆ. ಕರ್ನಾಟದಲ್ಲಿ ಜೂನ್ ತಿಂಗಳಲ್ಲಿ ಶನಿವಾರ ಮತ್ತು ಭಾನುವಾರ ರಜೆ ಬಿಟ್ಟರೆ ಜೂನ್ 17ಕ್ಕೆ ಬಕ್ರೀದ್ ಹಬ್ಬಕ್ಕೆ ಬ್ಯಾಂಕ್ ರಜೆ ಇರುತ್ತದೆ.
ಬ್ಯಾಂಕುಗಳಿಗೆ ರಜೆ ಇದ್ದರೂ ನೆಟ್ ಬ್ಯಾಂಕಿಂಗ್, ಬ್ಯಾಂಕ್ ಆ್ಯಪ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ ಇತ್ಯಾದಿ ಮೂಲಕ ಹಣದ ವಹಿವಾಟು ನಡೆಸಲು ಅವಕಾಶ ಇರುತ್ತದೆ. ಚೆಕ್ ಟ್ರಾನ್ಸೆಕ್ಷನ್, ಆರ್ಟಿಜಿಎಸ್ ಇತ್ಯಾದಿ ಸೇವೆ ಲಭಿಸದೇ ಹೋಗಬಹುದು.
Poll (Public Option)

Post a comment
Log in to write reviews