
ಬಿಹಾರ: ರಾಜ್ಯದಲ್ಲಿ ಸೇತುವೆ ಕುಸಿತ ಸರಣಿ ಮುಂದುವರೆದಿದ್ದು ಸಹರ್ಸಾ ಜಿಲ್ಲೆಯ ಮಹಿಷಿ ಗ್ರಾಮದಲ್ಲಿ ಜುಲೈ 10ರಂದು ಸಣ್ಣ ಸೇತುವೆ ಕುಸಿದಿದೆ. ಒಟ್ಟೂ 3 ವಾರದಲ್ಲಿ 13 ಸೇತುವೆ ಕುಸಿದಿದೆ ಎಂದು ವರದಿಯಾಗಿದೆ.
ಸೇತುವೆ ಕುಸಿತ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜ್ಯೋತಿ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸಿವಾನ್, ಸರನ್, ಮಧುಬನಿ, ಅರಾರಿಯ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳಲ್ಲಿ ಇತ್ತೀಚಿಗೆ ಸೇತುವೆ ಕುಸಿತ ಸರಣಿ ಸಂಬಂಧ ರಾಜ್ಯ ಸರ್ಕಾರ 15 ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ. ರಾಜ್ಯದ ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಿ, ಶಿಥಿಲವಾಗಿದ್ದರೆ ತಕ್ಷಣ ದುರಸ್ತಿಪಡಿಸಿ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದರು.
Poll (Public Option)

Post a comment
Log in to write reviews