
ಬೆಂಗಳೂರು: ವಿಧಾನಪರಿಷತ್‌ಗೆ ತೆರವುಗೊಂಡಿದ್ದ 11 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯಾಗಿದ್ದು, ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಚುಣಾವಣಾಧಿಕಾರಿ ವಿಜಯಲಕ್ಷೀ ಘೊಷಿಸಿದ್ದಾರೆ. ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರುಗಳು ಇಂತಿವೆ. ಐವನ್ ಡಿಸೋಜಾ, ಕೆ.ಗೋವಿಂದರಾಜ್ , ಜಗದೇವ್ ಗುತ್ತೇದಾರ್, ಟಿ.ಎನ್. ಜವರಾಯಿ ಗೌಡ, ಶ್ರೀಮತಿ ಬಲ್ಖೀಸ್ ಬಾನು, ಎನ್.ಎಸ್. ಬೋಸರಾಜ್, ಮುಳೆ ಮಾರುತಿರಾವ್, ಡಾ.ಯತೀಂದ್ರ ಎಸ್, ಸಿ.ಟಿ. ರವಿ, ರವಿಕುಮಾರ್ ಎನ್, ಎ ವಸಂತ್ ಕುಮಾರ್ ಆಯ್ಕೆಯಾಗಿದ್ದಾರೆ.
Poll (Public Option)

Post a comment
Log in to write reviews