2024-12-24 04:32:52

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಎರಡೇ ದಿನದಲ್ಲಿ 100 ಕೋಟಿ ರೂ. ಗಳಿಸಿದ ‘ಸ್ತ್ರೀ 2′

 

ಬೆಂಗಳೂರು: ಹಾರರ್-ಕಾಮಿಡಿ ಶೈಲಿಯಲ್ಲಿ ‘ಸ್ತ್ರೀ 2′ ಸಿದ್ಧವಾಗಿ, ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಿದೆ. ‘ಸ್ತ್ರೀ 2′ ಜೊತೆಗೆ ಅಕ್ಷಯ್ ಕುಮಾರ್ ಅವರ ‘ಖೇಲ್ ಖೇಲ್ ಮೇ’ ಮತ್ತು ಜಾನ್ ಅಬ್ರಹಾಂ, ಶಾರ್ವರಿ ವಾಘ್ ಅವರ ‘ವೇದ್’ ಕೂಡ ಆಗಸ್ಟ್ 15 ರಂದು ಬಿಡುಗಡೆ ಆಗಿದ್ದು, ಈ ಪೈಕಿ ‘ಸ್ತ್ರೀ 2’ ಗೆದ್ದಿದೆ.

ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್, ಅಪರಶಕ್ತಿ ಖುರಾನಾ, ಅಭಿಷೇಕ್ ಬ್ಯಾನರ್ಜಿ ಮತ್ತು ಪಂಕಜ್ ತ್ರಿಪಾಠಿ ನಟಿಸಿರುವ ಸ್ಟ್ರೀ 2 ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ. ಈ ಚಿತ್ರವು ತನ್ನ ಮೊದಲ ದಿನದಲ್ಲಿ ಭಾರತದಲ್ಲಿ 60.3 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಒಟ್ಟು ಕಲೆಕ್ಷನ್ ಸುಮಾರು 76.5 ಕೋಟಿ ರೂ. ಅದರ ಎರಡನೇ ದಿನದಲ್ಲಿ, ಚಿತ್ರ 30 ಕೋಟಿ ರೂ. ಗಳಿಕೆ ಕಂಡಿದೆ. ಸ್ಟ್ರೀ 2 ನ ಒಟ್ಟು ಗಳಿಕೆ 100 ಕೋಟಿ ರೂ ಆಗಿರುವುದು ವರದಿಯಾಗಿದೆ ಎನ್ನಲಾಗಿದೆ.

ಶ್ರದ್ಧಾ ಕಪೂರ್, ರಾಜ್​ಕುಮಾರ್ ರಾವ್, ಅಭಿಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ ‘ಸ್ತ್ರೀ 2 ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಪ್ರೀಮಿಯರ್ ಶೋಗಳಿಂದ 8 ಕೋಟಿ ರೂಪಾಯಿ ಹಾಗೂ ಮೊದಲ ದಿನದ ಗಳಿಕೆಯಿಂದ 46 ಕೋಟಿ ರೂಪಾಯಿ ಸಿಕ್ಕಿತ್ತು. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 54.35 ಕೋಟಿ ರೂಪಾಯಿ ಆಗಿತ್ತು. ಈ ಮೂಲಕ ‘ಕಲ್ಕಿ 2898 ಎಡಿ’ ಚಿತ್ರದ ಮೊದಲ ದಿನದ ಕಲೆಕ್ಷನ್​ನ ಈ ಸಿನಿಮಾ ಹಿಂದಿಕ್ಕಿತ್ತು.

ಸ್ತ್ರೀ 1 ಸಿನಿಮಾ 2018ರಲ್ಲಿ ಬಿಡುಗಡೆಯಾಯಿತು. ಸ್ತ್ರೀ 1ಚಿತ್ರ ಬಿಡುಗಡೆಯಾದ ಹೊಸ್ತಿಲಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದು, ಭಾರಿ ಕಲೆಕ್ಷನ್‌ ಮಾಡಿತ್ತು. ಸ್ತ್ರೀ’ ಸಿನಿಮಾದ ಮುಂದುವರಿದ ಭಾಗವಾಗಿ ‘ಸ್ತ್ರೀ 2’ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಹಲವು ವಿಶೇಷ ಅತಿಥಿ ಪಾತ್ರಗಳು ಇವೆ. ವರುಣ್ ಧವನ್ ಅವರು ಕೂಡ ಈ ಚಿತ್ರದಲ್ಲಿ ಬಂದು ಹೋಗಿದ್ದಾರೆ. ಈ ಚಿತ್ರದಿಂದ ಬಾಲಿವುಡ್​ಗೆ ಮೊದಲ ದೊಡ್ಡ ಗೆಲುವು ಸಿಕ್ಕಂತೆ ಆಗಿದೆ. ಈ ಸಿನಿಮಾಗೆ ಬುಕ್ ಮೈ ಶೋನಲ್ಲಿ ಒಳ್ಳೆಯ ರೇಟಿಂಗ್ ಸಿಕ್ಕಿದೆ.

 

 

Post a comment

No Reviews