
ನವದೆಹಲಿ: ಭೀಕರ ವಿಮಾನ ಅಪಘಾತದಲ್ಲಿ ಮಲಾವಿ ರಾಷ್ಟ್ರದ ಉಪಾಧ್ಯಕ್ಷ ಸೌಲೋಸ್ ಚಿಮಾಲಿ ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ವಿಮಾನ ದುರಂತದಲ್ಲಿ ಮರಣ ಹೊಂದಿದ ಘಟನೆ ಮಾಸುವ ಮುನ್ನವೇ ಮತ್ತೊಂದು ದೇಶದ ಉನ್ನತ ನಾಯಕ ವಿಮಾನ ಅಪಘಾತಕ್ಕೆ ಬಲಿಯಾಗಿದ್ದಾರೆ.
ಉಪಾಧ್ಯಕ್ಷ ಸೌಲೋಸ್ ಚಿಮಾಲಿ ಮತ್ತಿತರರು ಪ್ರಯಾಣಿಸುತ್ತಿದ್ದ ಸೇನಾ ವಿಮಾನ ನಾಪತ್ತೆಯಾಗಿತ್ತೆಂದು ಈ ಹಿಂದೆ ವರದಿಯಾಗಿತ್ತು. ವ್ಯಾಪಕ ಶೋಧ ಕಾರ್ಯಾಚರಣೆಯ ನಂತರ ಸೇನಾ ವಿಮಾನವು ದೇಶದ ಉತ್ತರದ ಪ್ರದೇಶವಾದ ಚಕಿಂಗವ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ವಿಮಾನ ದುರಂತದಲ್ಲಿ ಯಾರೊಬ್ಬರು ಬದುಕಿರುವ ಸಾಧ್ಯತೆಗಳಿಲ್ಲ ಎಂದು ಮಲಾವಿ ಅಧ್ಯಕ್ಷ ಲಾಜರಸ್ ಚಕ್ವೆರಾ ಅವರು ತಿಳಿಸಿದ್ದಾರೆ.
Poll (Public Option)

Post a comment
Log in to write reviews