
ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ.. ಈಗ ನಿಮ್ಮ ಸರ್ಕಾರವೇ ಅಧಿಕಾರದಲ್ಲಿರುವುದು… ನೀಮ್ಮ ಅಧಿಕಾರಕ್ಕೆ ಬಂದೂವರೆ ವರ್ಷ ಆಗಿದೆ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಮಾಡಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಬೇಡಿಕೆಯೊಂದು ಈಡೇರಿಸಿದರೆ ಒಂದು ಕೆಜಿ ಬಂಗಾರ ನೀಡುವ ಮೂಲಕ ನಿಮ್ಮನ್ನು ಸನ್ಮಾನಿಸುವೆ ಎಂದೂ ಸಚಿವೆ ಲಕ್ಷ್ಮಿ ನಿರಾಣಿ ಚಾಲೆಂಜ್ ಮಾಡಿದ್ದಾರೆ.
ಈ ಹಿಂದೆ ಬಿಜೆಪಿ ಆಡಳಿತವಿದ್ದಾಗ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಮಾಡಿಕೊಟ್ಟರೆ 1 ಕೆಜಿ ಕುಂದಾ ತಂದು ಸನ್ಮಾನ ಮಾಡುವುದಾಗಿ ಹೇಳಿದ್ದರು. ನಿಮ್ಮ ಕೈಯಲ್ಲಿ ಆಗದಿದ್ದರೆ ನಾವೇ ಅಧಿಕಾರಕ್ಕೆ ಬಂದು 2A ಮೀಸಲಾತಿ ಮಾಡುತ್ತೇವೆ. ಆಗ ನೀವು 1 ಜೊತೆ ಬಂಗಾರದ ಬಳೆ ಮಾಡಿಸಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹಾಕಿದ್ದ ಸವಾಲನ್ನು ನಿರಾಣಿ ಸ್ಮರಿಸಿ ಮರು ಸವಾಲ್ ಹಾಕಿದ್ದಾರೆ.
Poll (Public Option)

Post a comment
Log in to write reviews