
ಮೈಸೂರು: ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು. ದೇವಾಲಯದ ದಾಸೋಹ ಭವನದಲ್ಲಿ ಸುಮಾರು 35 ಹುಂಡಿಗಳನ್ನು ಎಣಿಕೆ ಮಾಡಲಾಗಿದ್ದು, 1.12 ಕೋಟಿ ರೂ. ಹಣ ಸಂಗ್ರಹವಾಗಿದೆ.
ಒಂದು ತಿಂಗಳ ಅವಧಿಯಲ್ಲಿ 35 ಹುಂಡಿಗಳ ಎಣಿಕೆಯಲ್ಲಿ 1,12,92,056 ರೂ. ಸಂಗ್ರಹವಾಗಿದೆ. ಜೊತೆಗೆ 51 ಗ್ರಾಂ 380 ಮಿಲಿಗ್ರಾಂಚಿನ್ನ, 1 ಕೆಜಿ 800 ಗ್ರಾಂ ಬೆಳ್ಳಿ, 46 ವಿದೇಶಿ ನೋಟುಗಳು ನಂಜುಂಡನಿಗೆ ಕಾಣಿಕೆಯಾಗಿ ಬಂದಿದೆ ಎನ್ನಲಾಗಿದೆ. ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಎಇಒ ಸತೀಶ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್, ಗುರು ಮಲ್ಲಯ್ಯ, ಮುಜರಾಯಿ ತಹಶೀಲ್ದಾರ್ ವಿದ್ಯುಲತಾ, ಕೆನರಾ ಬ್ಯಾಂಕ್ ಸಿಬ್ಬಂದಿ ಹುಂಡಿ ಎಣಿಕೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಭಕ್ತರು ದೇವಾಲಯದಲ್ಲಿರುವ ಅವ್ಯವಸ್ಥೆಯ ಬಗ್ಗೆ ಬರೆದಿರುವ ಪತ್ರಗಳು ಸಿಕ್ಕಿದ್ದು, ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸುವ ನಂಜುಂಡೇಶ್ವರನಿಗೆ ಈ ಬಾರಿ ಪರಮ ಭಕ್ತರಿಂದ ಪತ್ರಗಳೂ ಸಹ ಸಲ್ಲಿಕೆಯಾಗಿದೆ. ನಂಜುಂಡೇಶ್ವರನ ಹುಂಡಿಯಲ್ಲಿ ದೊರಕಿರುವ ಪತ್ರ, ಭಕ್ತರ ಮನವಿ ಅಧಿಕಾರಿಗಳು ಹಾಗೂ ರಾಜಕಾರಿಣಿಗಳ ಕಣ್ಣು ತೆರೆಸಲಿದೆಯೇ ಎಂಬುವುದನ್ನು ಎದುರು ನೋಡಬೇಕಿದೆ.
Poll (Public Option)

Post a comment
Log in to write reviews