ಟಾಪ್ 10 ನ್ಯೂಸ್
ಸಂಸದರ ನಿವಾಸದಲ್ಲಿ 10 ಗಂಟೆ ಸಾಕ್ಷ್ಯ ಸಂಗ್ರಹ: ಪ್ರಜ್ವಲ್ ದಿಂಬು, ಬೆಡ್ ವಶಕ್ಕೆ

ಹಾಸನ : ನಗರದ ಸಂಸದರ ನಿವಾಸದಲ್ಲಿ ನಿನ್ನೆ ಮಧ್ಯಾಹ್ನ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ಟೀಂನಿಂದ ಆರಂಭವಾಗಿದ್ದ ಪರಿಶೀಲನೆ, ಸಾಕ್ಷ್ಯ ಸಂಗ್ರಹ ಕಾರ್ಯ ಸತತ ಹತ್ತು ಗಂಟೆಗಳ ಕಾಲ ನಡೆಯಿತು.
ಪ್ರಜ್ವಲ್ ವಾಪಸ್ ಬರುತ್ತಿರುವ ವೇಳೆಯಲ್ಲೇ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಮೇ.31 ಕ್ಕೆ ದೇಶಕ್ಕೆ ಬರುವ ಹೇಳಿಕೆ ನೀಡಿದ ಬೆನ್ನಲ್ಲೆ ಮಹತ್ವದ ದಾಖಲೆ ಸಂಗ್ರಹಿಸಲು ಮುಂದಾದ ಎಸ್‌ಐಟಿ ನಗರದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಬೆಳಗಿನ ಜಾವ 4.30ರವರೆಗೆ ಸಾಕ್ಷ್ಯ ಸಂಗ್ರಹಿಸಿತು. ಪರಿಶೀಲನೆ ನಡೆಸಿದ ಎಸ್‌ಐಟಿ ತಂಡ ವಿಧಿ ವಿಜ್ಞಾನ ತಜ್ಞರ ಜೊತೆ ತೆರಳಿ ಪರಿಶೀಲನೆ ನಡೆಸಿದೆ. ಪ್ರಜ್ವಲ್ ಮಲಗುವ ಕೋಣೆಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಕೋಣೆಯಲ್ಲಿದ್ದ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದೆ. ವಿಧಿ ವಿಜ್ಞಾನ ತಜ್ಞರು ಪೂರಕ ಸಾಕ್ಷ್ಯ ಕಲೆ ಹಾಕಿದ್ದು, ಸಾಕ್ಷ್ಯಗಳ ಸಮೇತ ಎಸ್‌ಐಟಿ ತಂಡ ಬೆಂಗಳೂರಿಗೆ ತೆರಳಿದೆ.
Poll (Public Option)

Post a comment
Log in to write reviews