2024-09-19 09:05:19

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಈ ವರ್ಷ ರಿಲೀಸ್‌ ಆಗಲಿದೆ ಕಮಲ್‌ ಹಾಸನ್‌ ನಟನೆಯ 2 ಬಿಗ್‌ ಸಿನಿಮಾ

ತಮಿಳು ನಟ ಕಮಲ್ ಹಾಸನ್ ಭಾರತ ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿದ್ದಾರೆ. ಕಮಲ್ ಹಾಸನ್ ಅವರಿಗೆ ಈಗ 69 ವರ್ಷ. ಅವರು ಚಿತ್ರರಂಗದಲ್ಲಿ ಹಲವು ದಶಕಗಳಿಂದ ಇದ್ದಾರೆ. ವಿಶೇಷ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಅವರ ನಟನೆಯ ವಿಕ್ರಮ್‌  ಸಿನಿಮಾ ದೊಡ್ಡ ಗೆಲುವು ಕಂಡಿತು. ಈ ಚಿತ್ರಕ್ಕೆ ಅವರು ನಿರ್ಮಾಪಕರೂ ಹೌದು. ಹೀಗಾಗಿ, ದೊಡ್ಡ ಲಾಭ ಕಂಡರು. ಮುಂದಿನ ದಿನಗಳಲ್ಲಿ ಕಮಲ್ ಹಾಸನ್ ನಟನೆಯ 2 ಚಿತ್ರಗಳು ಒಂದೇ ತಿಂಗಳೊಳಗೆ ರಿಲೀಸ್ ಆಗಲಿವೆ. ಈ ಚಿತ್ರಗಳಿಂದ ಕಮಲ್ ಹಾಸನ್ 2,000 ಕೋಟಿಗೂ ಹೆಚ್ಚು ಗಳಿಸಲು ತಯಾರಿ ನಡೆಸಿದ್ದಾರೆ.

ಕಮಲ್ ಹಾಸನ್ ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಕಮಲ್‌ ಹಾಸನ್‌  ನಟಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಕೂಡ ಬಣ್ಣ ಹಚ್ಚಿದ್ದಾರೆ. ಈ ಚಿತ್ರವು 27 ಜೂನ್ 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಹುತಾರಾಗಣದ ಈ ಚಿತ್ರದಲ್ಲಿ ಕಮಲ್ ಹಾಸನ್ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ ಎನ್ನಲಾಗಿದೆ.

ಕಮಲ್ ಹಾಸನ್ ನಟನೆಯ ಮತ್ತೊಂದು ಸಿನಿಮಾ ಎಂದರೆ ಅದು ‘ಇಂಡಿಯನ್ 2’. ಈ ಚಿತ್ರವು ಅವರ ನಟನೆಯ ‘ಇಂಡಿಯನ್’ ಚಿತ್ರದ ಸೀಕ್ವೆಲ್ ಆಗಿದೆ.  ‘ಇಂಡಿಯನ್’ ಸಿನಿಮಾ ಅಂದಿನ ಕಾಲಕ್ಕೆ ಸಂಚಲನವನ್ನು ಸೃಷ್ಟಿಸಿತ್ತು. ಈ ಚಿತ್ರದ ಬಗ್ಗೆ ಕಮಲ್ ಅಭಿಮಾನಿಗಳೆಲ್ಲ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಬಜೆಟ್ 250 ಕೋಟಿ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಸೆಟ್ಟೇರಿ ಹಲವು ವರ್ಷಗಳು ಕಳೆದಿವೆ. ಈ ಚಿತ್ರ 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಜುಲೈ 18, 2024ರಂದು ಸಿನಿಮಾ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

 

Share:

Post a comment

No Reviews